April 2, 2026
Thursday, April 2, 2026
spot_img

ಬಾದ್‌ಶಾಗೆ ಮತ್ತೊಂದು ಸಂಕಷ್ಟ: ಹನಿ ಸಿಂಗ್ ಜೊತೆಗಿನ ವಾಲ್ಯೂಮ್ 1 ಹಾಡು ತೆಗೆದುಹಾಕಲು ಕೋರ್ಟ್ ಆದೇಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬಾಲಿವುಡ್ ಗಾಯಕ ಬಾದ್‌ಶಾಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಗಾಯಕ ಹನಿ ಸಿಂಗ್ ಜೊತೆಗೂಡಿ ರಚಿಸಿದ ವಾಲ್ಯೂಮ್ 1 ಹಾಡನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.

ಈ ಹಾಡಿನಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಿದೆ ಎಂದು ಕೋರ್ಟ್ ಟೀಕಿಸಿದ್ದು, ಜೊತೆಗೆ ಹಾಡಿನ ಸಾಹಿತ್ಯವು ಆಕ್ಷೇಪಾರ್ಹವಾಗಿದ್ದು, ಮಹಿಳೆಯರನ್ನು ಅಪಹಾಸ್ಯ ಮಾಡುವಂತಿದೆ ಎಂದು ಹೇಳಿದೆ.

ಇಂತಹ ಹಾಡು ಸಮಾಜಕ್ಕೆ ಮಾರಕವಾಗಿದ್ದು, ಕೂಡಲೇ ತೆಗೆದುಹಾಕುವಂತೆ ಹನಿ ಸಿಂಗ್ ಸೇರಿದಂತೆ ಸಂಬಂಧಪಟ್ಟವರಿಗೆ ಸೂಚಿಸಿದೆ.

ಹನಿ ಸಿಂಗ್ ಮತ್ತು ಬಾದ್‌ಶಾ ಅವರು 2006-07ರಲ್ಲಿ ಜೊತೆಯಾಗಿ ‘ವಾಲ್ಯೂಮ್ 1’ ಹಾಡನ್ನು ಸಿದ್ಧಪಡಿಸಿದ್ದರು.

ಕಳೆದ ತಿಂಗಳಷ್ಟೇ ಬಾದ್‌ಶಾ ಅವರ ಹಾಡು ‘ಟಟೀರಿ’ ಕೂಡ ವಿವಾದಕ್ಕೆ ಸಿಲುಕಿತ್ತು. ಈ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಅತಿರೇಕದ ಅಶ್ಲೀಲತೆಯಿಂದ ಕೂಡಿವೆ ಎಂದು ಜನರು ಕಿಡಿಕಾರಿದ್ದರು. ಬಾದ್‌ಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮೆಯಾಚಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !