ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಬೆಳಗಾವಿ ತಾಲೂಕಿನ ಯಮನಾಪುರದಲ್ಲಿ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 52 ವರ್ಷದ ಸರೋಜಾ ಕಿರಬಿ ಎನ್ನುವ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಸರೋಜ ಹುಕ್ಕೇರಿ ತಾಲೂಕಿನ ಶಿರೂರು ಮೂಲದ ಮಹಿಳೆ ಎಂದು ತಿಳಿದುಬಂದಿದೆ.
ಸರೋಜ ಹೊಳೆಪ್ಪ ಎನ್ನುವವರು ಬಳಿ 2.3 ಲಕ್ಷ ಸಬ್ಸಿಡಿ ಸಾಲವನ್ನು ಪಡೆದಿದ್ದರು. ಹೊಳೆಪ್ಪಾ ದಡ್ಡಿಯನ್ನು ನಂಬಿ ಸರೋಜಾ ಸಾಲವನ್ನು ಪಡೆದುಕೊಂಡಿದ್ದರು. ಹೊಳೆಪ್ಪನಿಗೆ ಅರ್ಧದಷ್ಟು ಹಣವನ್ನು ಸರೋಜಾ ನೀಡಿದ್ದರು. ಅರ್ಧ ಸಾಲ ಕಟ್ಟಿದ ಮೇಲೆ ಪೂರ್ತಿ ಸಾಲ ಕಟ್ಟಲು ಸರೋಜಾ ಗೆ ಸೂಚನೆ ನೀಡಲಾಗಿದೆ. ಸಬ್ಸಿಡಿ ಸಾಲ ಕೊಟ್ಟಿಲ್ಲ ಪೂರ್ತಿ ಹಣ ಕಟ್ಟಲು ಸೂಚನೆ ನೀಡಲಾಗಿದೆ.
ಇದರಿಂದ ಬೇಸತ್ತು ಸರೋಜಾ ಬಾವಿಗೆ ಹಾರಿದ್ದಾರೆ. ಮದ್ಯಸ್ತಿಕೆ ವಹಿಸಿದ್ದ ಹೊಳೆಪ್ಪನ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.