ಹೊಸದಿಗಂತ ಹಾಸನ :
ಮೈಕ್ರೋಫೈನ್ಸಾನ್ ಸಿಬ್ಬಂದಿ ಕಿರುಕುಳ ಹಿನ್ನಲೆ ಮಹಿಳೆಯೋರ್ವ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಳಿಬಂದಿದೆ.
ಕೆಂಚಮ್ಮ (50) ಆತ್ಮಹತ್ಯೆಗೆ ಶರಣಾದ ಮಹಿಳೆ. ಜಿಲ್ಲೆಯ ಆಲೂರು ತಾಲ್ಲೂಕಿನ, ಹಳ್ಳಿಯೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಕೆಂಚಮ್ಮ BSS, EIF ಫೈನಾನ್ಸ್ ಕಂಪನಿಯಿಂದ ಎರಡು ಲಕ್ಷ ಸಾಲ ಮಾಡಿದ್ದರು. ಪ್ರತಿ ತಿಂಗಳು ಸರಿಯಾಗಿ ಹಣ ಕಟ್ಟುತ್ತಿದ್ದ ಮಹಿಳೆ ಈ ತಿಂಗಳು ಹಣ ಇಲ್ಲದ ಕಾರಣ ಕಂತು ಕಟ್ಟಿಲ್ಲ. ಮೈಕ್ರೋಫೈನಾನ್ಸ್ ಸಿಬ್ಬಂದಿ ಇಂದೇ ಹಣ ಕಟ್ಟುಬೇಕೆಂದು ಬಿಎಸ್‌ಎಸ್ ಫೈನಾನ್ಸ್ ಸಿಬ್ಬಂದಿ ಪಟ್ಟು ಹಿಡಿದು ಮನೆಯ ಬಳಿಯೇ ಕುಳಿತಿದ್ದ. ಇದರಿಂದ ಮನನೊಂದು ಕೆಂಚಮ್ಮ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.
ಕೆಂಚಮ್ಮ ಸಾವಿನ ಸುದ್ದಿ ತಿಳಿದು ಮೈಕ್ರೋಫೈನಾನ್ಸ್ ಸಿಬ್ಬಂದಿಗಳು ಎಸ್ಕೇಪ್ ಆಗಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.