ಪಹಲ್ಗಾಮ್ ಉಗ್ರ ದಾಳಿಯ ಮತ್ತೊಂದು ವಿಡಿಯೋ ವೈರಲ್‌: ಪ್ರವಾಸಿಗನ ಕ್ಯಾಮೆರಾದಲ್ಲಿ ಉಗ್ರರ ಪೈಶಾಚಿಕ ಕೃತ್ಯ ಸೆರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ಉಗ್ರ ದಾಳಿ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು, ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಉಗ್ರರ ಪೈಶಾಚಿಕ ಕೃತ್ಯ ಸೆರೆಯಾಗಿದೆ.

ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಿಡಿಯೋ ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಅವರಿಗೇ ಅರಿವಿಲ್ಲದೇ ರೆಕಾರ್ಡ್ ಆಗಿದೆ.

ಮೂಲಗಳ ಪ್ರಕಾರ ಗುಜರಾತ್ ನ ಅಹ್ಮದಾಬಾದ್ ನಿವಾಸಿಯೊಬ್ಬರು ಅಂದು ಪಹಲ್ಗಾಮ್ ಗೆ ಆಗಮಿಸಿದ್ದರು. ಈ ವೇಳೆ ರೋಪ್ ಕ್ರಾಸಿಂಗ್ ಮಾಡುವ ವೇಳೆ ಅವರು ಸೆಲ್ಫಿ ಕ್ಯಾಮೆರಾದಲ್ಲಿ ರೋಚಕ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಆದರೆ ಅದೇ ಕ್ಯಾಮೆರಾದಲ್ಲಿ ಅವರಿಗೇ ಅರಿವಿಲ್ಲದಂತೆ ಉಗ್ರರ ಪೈಶಾಚಿಕ ಕೃತ್ಯಕೂಡ ಸೆರೆಯಾಗಿದೆ.

ರೋಪ್ ಕ್ರಾಸಿಂಗ್ ವೇಳೆ ವ್ಯಕ್ತಿ ಕ್ಯಾಮೆರಾ ಆನ್ ಮಾಡಿ ಹೋಗುತ್ತಿದ್ದಾಗ ಕೆಳಗೆ ಉಗ್ರರು ದಾಳಿ ಆರಂಭಿಸಿದ್ದಾರೆ.

https://x.com/MrSinha_/status/1916830660456497575?ref_src=twsrc%5Etfw%7Ctwcamp%5Etweetembed%7Ctwterm%5E1916830660456497575%7Ctwgr%5E6669275cf681d1f76440a23d8715d225973729e0%7Ctwcon%5Es1_&ref_url=https%3A%2F%2Fwww.kannadaprabha.com%2Fnation%2F2025%2FApr%2F28%2Fanother-horrific-footage-of-pahalgam-terrorist-attack-goes-viral

53 ಸೆಕೆಂಡ್‌ನ ವಿಡಿಯೋ ಇದಾಗಿದ್ದು, ವಿಡಿಯೋದ ಆರಂಭದಲ್ಲಿ ಜಿಪ್‌ಲೈನ್‌ ಆಪರೇಟರ್‌ ಮೂರು ಬಾರಿ ಅಲ್ಲಾಹು ಅಕ್ಬರ್‌, ಅಲ್ಲಾಹು ಅಕ್ಬರ್‌ ಎಂದು ಹೇಳುತ್ತಿರುವುದು ಕಂಡಿದೆ. ಈ ವೇಳೆಗಾಗಲೇ ಉಗ್ರರು ಗುಂಡು ಹಾರಿಸುತ್ತಿರುವ ಸದ್ದು ಕೂಡ ಕೇಳುತ್ತದೆ.

ವೀಡಿಯೊದಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸುತ್ತಿದ್ದರೆ, ಜನರು ಜೀವ ಉಳಿಸಿಕೊಳ್ಳಲು ಓಡುತ್ತಿರುವುದನ್ನು ಕಾಣಬಹುದಾಗಿದೆ. ಇನ್ನೂ ಕೆಲವವು ಗುಂಡು ಬಿದ್ದ ನಂತರ ಓಡುವಾಗ ನೆಲಕ್ಕೆ ಬೀಳುವುದನ್ನು ಕಾಣಬಹುದು.

ಆದರೆ ಇದಾವುದರ ಪರಿವೇ ಇಲ್ಲದೇ ಮೇಲೆ ಈ ವ್ಯಕ್ತಿ ರೋಪ್ ಕ್ರಾಸಿಂಗ್ ಮಾಡುತ್ತಾ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದುದು ಕಂಡುಬಂದಿದೆ. ರೋಪ್ ಕ್ರಾಸಿಂಗ್ ನ ಮುಕ್ತಾಯದ ಸಂದರ್ಭದಲ್ಲಿ ಏನೋ ಆಗುತ್ತಿದೆ ಎಂದು ಭಾವಿಸಿದ ಪ್ರವಾಸಿಗ ಆಗ ಕ್ಯಾಮೆರಾ ಆಫ್ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!