ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಗಾಗಿ ಜನ ಸಾಕಷ್ಟು ಗಿಮಿಕ್ ಮಾಡುತ್ತಿದ್ದಾರೆ.. ಅದರಲ್ಲೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಚಮತ್ಕಾರ, ಡ್ಯಾನ್ಸ್ ಮಾಡುವ ಮೂಲಕ ಜನರನ್ನು ಆಕರ್ಷಿಸುತ್ತಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಡ್ಯಾನ್ಸ್ ವಿಡಿಯೋಗಳಿಗೆ ಬೇಡಿಕೆ ಹೆಚ್ಚಿದೆ. ಇಬ್ಬರು ಹುಡುಗಿಯರು ಡ್ಯಾನ್ಸ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ದೃಶ್ಯ ದೆಹಲಿ ಮೆಟ್ರೋದಲ್ಲಿ ಕಂಡುಬಂದಿತು.
ದೆಹಲಿ ಮೆಟ್ರೋದಲ್ಲಿ ಜಗಳ, ನೃತ್ಯ, ಹಾಡುವುದು, ಚುಂಬಿಸುವುದು ಮತ್ತು ಅಸಭ್ಯವಾಗಿ ವರ್ತಿಸ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಪೋಲ್ ಡ್ಯಾನ್ಸ್ ಮಾತ್ರ ಬಾಕಿ ಇತ್ತು. ಈಗ ಈ ಇಬ್ಬರು ಹುಡುಗಿಯರು ಆ ಕಾರ್ಯವನ್ನೂ ಮುಗಿಸಿದ್ದಾರೆ. ಮೆಟ್ರೋ ಈಗ ಉಚಿತ ಮನರಂಜನೆಯ ಸಾಧನವಾಗಿ ಮಾರ್ಪಟ್ಟಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಈ ಕ್ಲಿಪ್ 61 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಐನೂರಕ್ಕೂ ಹೆಚ್ಚು ಲೈಕ್‌ಗಳು. ಸುಂದರ ಹುಡುಗಿಯರು ಮಾಡಿರುವ ಡ್ಯಾನ್ಸ್ ಸೂಪರ್ ಎಂದು ಕೆಲವರು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಇವರಿಗೆ ಹುಚ್ಚು ಹಿಡಿದಿದ್ಯಾ ಎಂದು ಕಮೆಂಟ್ ಗಳಿಂದ ಸದ್ದು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಟ್ರೆಂಡ್ ಆಗುತ್ತಿದೆ.