JNUನಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹ: ಅಖಿಲ ಭಾರತ ಬ್ರಾಹ್ಮಣ ಮಹಾಸಂಘ ಖಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೆಹಲಿಯ JNUನಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹವನ್ನು ಅಖಿಲ ಭಾರತ ಬ್ರಾಹ್ಮಣ ಮಹಾಸಂಘ ಖಂಡಿಸಿದೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸದಸ್ಯ ತ್ರಿವಿಕ್ರಮ ಜೋಶಿ , ಸಮಾಜದಲ್ಲಿನ ಸಣ್ಣ ಮನಸ್ಥಿತಿಯುಳ್ಳ ವ್ಯಕ್ತಿಗಳು ಇಂತಹ ಬರಹ ಬರೆದಿದ್ದಾರೆ. ಇದು ಖಂಡನೀಯವಾದದ್ದು ಎಂದರು.

ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಸಹ ನಡೆಯುತ್ತಿದೆ. ಹಾಗಾಗಿ ನಾವು ಈ ಪ್ರಕರಣವನ್ನು ಸಾರ್ವಜನಿಕಗೊಳಿಸಲು ಇಷ್ಟ ಪಡೋದಿಲ್ಲ ಎಂದು ತಿಳಿಸಿದರು.

ಆ ರೀತಿ ಮಾಡಿದವರು ವಿದ್ಯಾರ್ಥಿಗಳೇ ಇರಬಹುದು. ಹೀಗಾಗಿ ನಾವು ಈ ವಿಚಾರವನ್ನ ಮತ್ತಷ್ಟು ದೊಡ್ಡದು ಮಾಡಿದ್ರೆ ವಿದ್ಯಾರ್ಥಿಯ ಜೀವನ ಹಾಳಾಗಬಹುದು. ಹೀಗಾಗಿ ಈ ವಿಷ್ಯ ದೊಡ್ಡದು ಮಾಡೋಲ್ಲ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!