ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ವೈದ್ಯಕೀಯ ಸಂಸ್ಥೆಗಳ ಹಾಸ್ಟೆಲ್‌ಗಳಲ್ಲಿ ಸೀಲಿಂಗ್ ಫ್ಯಾನ್‌ಗಳಲ್ಲಿ ‘ಆತ್ಮಹತ್ಯೆ ವಿರೋಧಿ’ ಸಾಧನಗಳನ್ನು ಅಳವಡಿಸಲು ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯಾಗಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಿರ್ಧರಿಸಿದೆ.
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಮ್ಮ ಹಾಸ್ಟೆಲ್ ಕೊಠಡಿಗಳಲ್ಲಿ ಎರಡು ವಾರಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ನೇಣು ಬಿಗಿದುಕೊಂಡ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆತ್ಮಹತ್ಯೆ ತಡೆಯುವ ಕ್ರಮಗಳ ಬಗ್ಗೆ ಚರ್ಚಿಸಲು RGUHS ನ ಪಠ್ಯಕ್ರಮ ಅಭಿವೃದ್ಧಿ ಕೋಶ ಡಾ. ಸಂಜೀವ್ ನೇತೃತ್ವದ ತಂಡವು ಜುಲೈ ಕೊನೆಯ ವಾರದಲ್ಲಿ MIMS ಗೆ ಭೇಟಿ ನೀಡಿತ್ತು.
ಆತ್ಮಹತ್ಯೆ ತಡೆಗಟ್ಟಲು ಸೀಲಿಂಗ್ ಫ್ಯಾನ್‌ಗಳಲ್ಲಿ ಸುರಕ್ಷತಾ ಸಾಧನಗಳನ್ನು ಅಳವಡಿಸುವ ಯೋಜನೆಗಳು ನಡೆಯುತ್ತಿವೆ ಎಂದು ಡಾ. ಸಂಜೀವ್ ಬಹಿರಂಗಪಡಿಸಿದರು.
ಪ್ರಸ್ತಾವಿತ ಸಾಧನವು ಸೀಲಿಂಗ್ ಫ್ಯಾನ್‌ನಲ್ಲಿ ಹೆಚ್ಚು ತೂಕ ಕಂಡು ಬಂದರೆ ಅದನ್ನು ಪತ್ತೆ ಹಚ್ಚುವಂತೆ ವಿನ್ಯಾಸಗೊಳಿಸಲಾಗಿದೆ. ಹೆಚ್ಚು ತೂಕ ಬಿದ್ದರೆ ಸೈರನ್ ಮೊಳಗಿಸುವ ಮೂಲಕ ಹಾಸ್ಟೆಲ್ ಅಧಿಕಾರಿಗ ಳನ್ನು ಎಚ್ಚರಿಸುತ್ತದೆ. ಶೀಘ್ರವೇ ಕಾರ್ಯೋನ್ಮುಖವಾಗಲು ನೆರವಾಗುತ್ತದೆ. ಈ ದ್ವಿಮುಖ ಕಾರ್ಯವಿಧಾನವು ಸಾವುನೋವುಗಳನ್ನು ತಡೆಗಟ್ಟಲು ಮಾತ್ರವಲ್ಲದೆ, ಜೀವಗಳನ್ನು ಉಳಿಸಲು ನಿರ್ಣಾಯಕ ಪ್ರತಿಕ್ರಿಯೆ ಸಮಯವನ್ನು ಒದಗಿಸಲು ಉದ್ದೇಶಿಸಲಾಗಿದೆ.