ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಕುಟ್ಟಿ ಅನುಪಮಾ ಪರಮೇಶ್ವರನ್ ಸದ್ಯ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಮಲಯಾಳಂಗಿಂತ ತೆಲುಗಿನಲ್ಲಿ ಹೆಚ್ಚು ಸಿನಿಮಾ ಮಾಡುವ ಮೂಲಕ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಯರಾಗಿರುವ ಮುದ್ದುಗುಮ್ಮ ಇಂದು ಓಣಂ ಸ್ಪೆಷಲ್ ಹಾಡು ಹಾಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಓಣಂ ಹಬ್ಬಕ್ಕೆ ರೇಷ್ಮೆ ಬಾರ್ಡರ್‌ನೊಂದಿಗೆ ಬಿಳಿ ಸೀರೆಯನ್ನು ಧರಿಸಿ ಗುಂಗುರು ಕೂದಲಿನ್ನು ಗಾಳಿಗೆ ಬಿಟ್ಟು, ಮುದ್ದು ಮುದ್ದಾಗಿ ಓಣಂ ಹಾಡನ್ನು ಹಾಡಿದ್ದಾರೆ. ಮುದ್ದಾಗಿ ಹಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿ ಎಲ್ಲರಿಗೂ ಓಣಂ ಶುಭಾಶಯ ಕೋರಿದ್ದಾರೆ. ಅನುಪಮಾ ಎಷ್ಟು ಮುದ್ದಾಗಿದೆ ಹಾಡು ಮತ್ತು ನೀವು ಕೂಡ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಓಣಂ ಕೇರಳದಲ್ಲಿ ಮಲಯಾಳಿಗಳು ಆಚರಿಸುವ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಓಣಂ ದಿನದಂದು, ಕೇರಳದ ಮಂದಿ ಸಂಪೂರ್ಣ ಬಿಳಿ, ರೇಷ್ಮೆ ಸೀರೆಗಳನ್ನು ಧರಿಸುತ್ತಾರೆ. ಅನೇಕ ಸೆಲೆಬ್ರಿಟಿಗಳು ಈಗಾಗಲೇ ಓಣಂ ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ.