ಅನುಶ್ರೀ ಮದುವೆಗೆ ಮುಹೂರ್ತ ಫಿಕ್ಸ್! ಎಷ್ಟು ಸಿಂಪಲ್ ಆಗಿದೆ ನೋಡಿ Invitation Card!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಲವು ವರ್ಷಗಳಿಂದ ಮದುವೆಯ ಕುರಿತಾಗಿ ಊಹಾಪೋಹಗಳು ಹರಿದಾಡುತ್ತಿದ್ದರೂ, ಇದೀಗ ಆ ಸುದ್ದಿಗೆ ಅಧಿಕೃತ ಮುಕ್ತಿ ಸಿಕ್ಕಿದೆ. ಕೊಡಗು ಮೂಲದ ರೋಷನ್ ಅವರೊಂದಿಗೆ ಅನುಶ್ರೀ ಮದುವೆಯಾಗಲಿದ್ದು, ಆಗಸ್ಟ್ 28ರಂದು ಅವರ ಸಪ್ತಪದಿ ನಡೆಯಲಿದೆ.

ಮದುವೆಯ ಆಮಂತ್ರಣ ಪತ್ರಿಕೆ ಈಗಾಗಲೇ ಆಪ್ತರಿಗೆ ಹಂಚಲಾಗಿದೆ. ವಿಶೇಷವೆಂದರೆ, ಆಹ್ವಾನ ಪತ್ರಿಕೆ ತುಂಬಾ ಸರಳವಾಗಿದ್ದು, “ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ” ಎಂಬ ಸಾಹಿತ್ಯ ಅದರಲ್ಲಿ ಗಮನ ಸೆಳೆಯುತ್ತಿದೆ. ಮದುವೆಯ ಮುಖ್ಯ ವಿಧಿ ಬೆಳಿಗ್ಗೆ 10.56ಕ್ಕೆ ನಡೆಯಲಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಕಾರ್ಯಕ್ರಮ ಜರುಗಲಿದೆ.

ಅನುಶ್ರೀ ಅವರು ಹಲವಾರು ವರ್ಷಗಳಿಂದ ಬಣ್ಣದ ಲೋಕದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಟಿವಿ ಶೋಗಳು, ಪ್ರಶಸ್ತಿ ಸಮಾರಂಭಗಳು ಮತ್ತು ಹಲವಾರು ವೇದಿಕೆಗಳಲ್ಲಿ ನಿರೂಪಣೆ ಮಾಡಿರುವುದರಿಂದ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಸಿನಿಮಾ ಕ್ಷೇತ್ರದಲ್ಲಿಯೂ ಅವರು ನಟಿಸಿದ್ದಾರೆ. ಹೀಗಾಗಿ ಮದುವೆಯ ಸಂಭ್ರಮಕ್ಕೆ ಚಿತ್ರರಂಗದ ಜೊತೆಗೆ ರಾಜಕೀಯ ವಲಯದ ಗಣ್ಯರೂ ಹಾಜರಾಗುವ ಸಾಧ್ಯತೆ ಇದೆ.

ಈ ಮೊದಲು ಅನುಶ್ರೀ ಅವರ ಮದುವೆ ಕುರಿತು ಹಲವು ಗಾಸಿಪ್‌ಗಳು ಹರಿದಾಡಿದ್ದರೂ, ಅವು ನಿಜವಾಗಿರಲಿಲ್ಲ. ಆದರೆ ಈ ಬಾರಿ ಖಚಿತ ದಿನಾಂಕ ನಿಗದಿಯಾಗಿರುವುದು ಅವರ ಅಭಿಮಾನಿಗಳಿಗೆ ಸಂತೋಷ ತಂದಿದೆ. ಇತ್ತೀಚೆಗೆ ರೋಷನ್ ಜೊತೆ ಅವರ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮದುವೆಯ ವಾತಾವರಣಕ್ಕೆ ಇನ್ನಷ್ಟು ಬಣ್ಣ ತುಂಬಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!