ಹೊಸದಿಗಂತ ವರದಿ, ವಿಜಯಪುರ:
ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಆದರೆ, ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು. ಇದು ನಮ್ಮ ಸಂವಿಧಾನದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಡಿಜೆಹಳ್ಳಿ ಕೆಜಿ ಹಳ್ಳಿ ಬಗ್ಗೆ ಶಾಸಕ ತನ್ವೀರ ಶೇಠ್ ಪತ್ರದ ಹಿನ್ನೆಲೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಬಳಿಕ ಸತ್ಯಾಸತ್ಯತೆ ಹೊರಗಡೆಗೆ ಬರುತ್ತದೆ. ಯಾವುದೇ ಪಕ್ಷದವರು ಇದ್ದರು ಶಿಕ್ಷೆ ಆಗಲೇಬೇಕು ಎಂದರು.
ಪಿಎಫ್‌ಐನವರ ಮೇಲಿನ ಕೇಸ್ ವಾಪಸ್ಸು ಹಿಂಪಡೆಯುತ್ತಿದೆ ಎಂದಿರುವ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದಂತೆ ನಮ್ಮ ಸರ್ಕಾರ ನಡೆಯುದಿಲ್ಲ. ಯತ್ನಾಳ ಹೇಳಿದಂತೆ ನಾವು ನಡೆದುಕೊಳ್ಳಲು ಆಗಲ್ಲ. ಯಾವುದೇ ಧರ್ಮ, ಜಾತಿ ಇದ್ದರೂ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು ಎಂದರು.
ಒಬ್ಬ ಪೊಲೀಸ್ ತಪ್ಪು ಮಾಡಿದರೆ ಇಡೀ ಪೊಲೀಸ್ ತಪ್ಪು ಮಾಡಿದಂತೆ ಆಗಬಾರದು. ನಾವು ಎಂಟು ಗಂಟೆ ಕೆಲಸ ಮಾಡುತ್ತೇವೆ. ಆದರೆ, ಪೊಲೀಸನವರು 12 ಗಂಟೆ ಕಾಲ ಕೆಲಸ ಮಾಡುತ್ತಾರೆ. ಹೀಗಾಗಿ ಪೊಲೀಸರಿಗೆ ನ್ಯಾಯ ಸಿಗಬೇಕು ಎಂದರು.
ಪೊಲೀಸ್, ವರದಿಗಾರರು, ರಾಜಕಾರಣಿಗಳಲ್ಲೂ ಒಳ್ಳೆಯವರು, ಕೆಟ್ಟವರು ಇರ್ತಾರೆ ಎಂದು ಮಾಜಿ ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದರು.
ಪೊಲೀಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದೆ, ಪೊಲೀಸರಿಗೆ ಗೌರವ ನೀಡಬೇಕು ಎಂದರು.
ಮುಖ್ಯಮಂತ್ರಿ ಇಳಿಸುವ ಬಗ್ಗೆ ಬಿ.ಕೆ. ಹರಿಪ್ರಸಾದ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಎಲ್ಲವನ್ನು ಗಮನಿಸುತ್ತದೆ. ಪಕ್ಷದಲ್ಲಿ ಯಾರದೇ ಹೇಳಿಕೆ ಇದ್ದರೂ ಪಕ್ಷ ಚರ್ಚಿಸುತ್ತದೆ. ಹೈಕಮಾಂಡ್ ಅವರು ಇದ್ದಾರೆ ಎಂದರು.