ಹೊಸದಿಗಂತ ವರದಿ,ಶಿವಮೊಗ್ಗ:
ನಾಳೆಯಿಂದ ಯೂನಿಫಾರಂ ಏನಾಗುತ್ತೇ..? ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.
ಶನಿವಾರ ತೀರ್ಥಹಳ್ಳಿಯಲ್ಲಿ ಹಿಜಾಬ್ ನಿಷೇಧ ವಾಪಸ್ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಹಿಜಾಬ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಗಮನಿಸಿದ್ದೇನೆ. ಬಹಳ ವರ್ಷಗಳ ಹಿಂದೆ ಇವರ ಸರ್ಕಾರವೇ ಮಾಡಿತ್ತು. ಕಾಲೇಜಿನ ಹೊರಗೆ ಹಿಜಾಬ್ ಹಾಕಬಹುದು. ಆದರೇ, ತರಗತಿಯಲ್ಲಿ ಯೂನಿಫಾರಂ ಇರಬೇಕು ಎಂಬ ನಿಯಮವಿದೆ.
ಕೋರ್ಟ್ ಕೂಡ ಸರ್ಕಾರದ ನಿರ್ಧಾರ ಬೆಂಬಲಸಿದೆ. ಮೈಸೂರಿನ ಸಭೆಯಲ್ಲಿ ಸಿಎಂ ಎಲ್ಲಾವನ್ನು ತೆಗೆದು ಹಾಕಿದ್ದೇವೆ ಎಂದಿದ್ದಾರೆ.
ಯಾರು ಬೇಕಾದ್ರೂ ಯಾವ ಡ್ರೆಸ್ ಅಲ್ಲಿ ಬೇಕಾದ್ರೂ ಬರಬಹುದಾ? ಒಂದೊಂದು ಧರ್ಮದವರು ಒಂದೊಂದು ರೀತಿ ಬರಬಹುದಾ? ಎಂದು ಪ್ರಶ್ನಿಸಿದರು.
ಇತ್ತೀಚಿಗೆ ಸಿಎಂ ವಿಚಿತ್ರ ಹೇಳಿಕೆ ಕೊಡುತ್ತಿದ್ದಾರೆ. ಮೌಲ್ವಿಗಳ ಸಭೆಯಲ್ಲಿ ಉದ್ವೇಗಕ್ಕೆ ಒಳಗಾಗಿ 10 ಸಾವಿರ ಕೋಟಿ ಕೋಡ್ತೇನೆ ಎಂದಿದ್ದರು.. ರಾಜ್ಯದ ಸಂಪತ್ತಿನಲ್ಲಿ ಪಾಲನ್ನು ಕೊಡುವ ಬದ್ದತೆಯಿದೆ ಎಂದಿದ್ರು.. ಇದೇ ಮಾತನ್ನು ಬರಪೀಡಿತ ರೈತರ ಬಳಿ ಹೋಗಿ ಹೇಳಲಿಲ್ಲ.
ಆ ವರ್ಗಕ್ಕೆ ಹೇಳಲು ದುಡ್ಡಿಲ್ಲ. ಆದರೇ, ವೋಟ್ ಬ್ಯಾಂಕ್ ಗೆ ಹೇಳಲು ಹಣವಿದೆ. ಇವೆಲ್ಲಾ ಸಿದ್ದರಾಮಯ್ಯರಿಂದ ನಿರೀಕ್ಷಿತವಾದದ್ದೇ ಎಂದರು.
ನಾಳೆಯಿಂದ ಕೇಸರಿ ಹಾಕಿ ಬಂದ್ರೇ ಕೇಸ್ ಹಾಕಿಸ್ತಾರೆ. ಈ ರೀತಿಯ ಮಾನಸಿಕತೆ ಸಿದ್ದರಾಮಯ್ಯರಿಗೆ ಮೂಲಭೂತವಾಗಿಯೇ ಇದೆ.
ಅದು ಈಗ ಪ್ರಕಟವಾಗುತ್ತಿದೆ. 136 ಸೀಟ್ ಗೆಲ್ಲಿಸಿರೋದು ಅಲ್ಪಸಂಖ್ಯಾತರು ಎಂಬ ಮನಸ್ಥಿತಿಯಿದೆ. ಮುಂದೆ ಆಗೋದನ್ನು ನಾವಲ್ಲರೂ ಅನುಭವಿಸಬೇಕು. ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯರಿಗೆ ವೋಟ್ ಕೊಟ್ಟವರು ಪಶ್ಚಾತಾಪ ಪಡೋದು ಜಾಸ್ತಿ ಇದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.