ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾರೇ ಆಗ್ಲಿ ಕಾನೂನನ್ನು ಕೈಗೆತ್ತಿಕೊಳ್ಳೋದಕ್ಕೆ ಬಿಡೋದಿಲ್ಲ. ಎಲ್ಲದಕ್ಕೂ ಇತಿ ಮಿತಿ ಅನ್ನೋದು ಇದ್ದೇ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕನ್ನಡ ಪರ ಹೋರಾಟಕ್ಕೆ ನಮ್ಮ ಬೆಂಬಲ ಇದೆ, ಆದರೆ ಸಾರ್ವಜನಿಕರಿಗೆ ತೊಂದರೆ, ಸಾರ್ವಜನಿಕರ ಆಸ್ತಿ ಪಾಸ್ತಿ ಹಾಳು ಮಾಡೋದಕ್ಕೆ ಬೆಂಬಲ ನೀಡೋದಿಲ್ಲ. ಪ್ರಜಾಪ್ರಭುತ್ವದಲ್ಲಿ ಏನು ಬೇಕಾದ್ರೂ ಮಾಡಿ ಆದರೆ ಇದನ್ನು ಒಪ್ಪೋದಿಲ್ಲ ಎಂದಿದ್ದಾರೆ.
ಜನರಿಗೆ ತಿಳಿ ಹೇಳೋಣ, ಕನ್ನಡ ಬೋರ್ಡ್ ಬಳಕೆ ಮಾಡಿ ಎಂದು ಹೇಳೋಣ ಆದರೆ ಬೆದರಿಕೆ ಹಾಕೋದು ತಪ್ಪು. ನನ್ನ ಮನೆ ಮುಂದೆ ಬಂದು ಬೇಕಾದ್ರೆ ಪ್ರತಿಭಟನೆ ಮಾಡ್ಲಿ ಆದರೆ ಕಾನೂನು ಕೈಗೆತ್ತಿಕೊಳ್ಳಬಾರದು ಎಂದಿದ್ದಾರೆ.