ತಮ್ಮ ತಪ್ಪು ಅರಿವಾದ ಯಾರೇ ಆಗಿರಲಿ ಪಕ್ಷಕ್ಕೆ ವಾಪಾಸ್‌ ಬರಬಹುದು: ವಿಜಯೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಮ್ಮ ತಪ್ಪು ಅರಿವಾದರೆ ಯಾರೇ ಆದರೂ ಸಹ ಪಕ್ಷಕ್ಕೆ ಮರಳಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮುಕ್ತ ಆಹ್ವಾನ ನೀಡಿದ್ದಾರೆ.

ಈಶ್ವರಪ್ಪ ಘರ್ ವಾಪ್ಸಿ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಇದೆಲ್ಲಾ ಕೇಂದ್ರದ ಮಟ್ಟದಲ್ಲಿ ಚರ್ಚೆ ಆಗುವ ವಿಚಾರ. ನಮ್ಮ ಹಂತದಲ್ಲಿ ಚರ್ಚೆ ಆಗಲ್ಲ. ಆದ್ರೆ ಯಾರ‍್ಯಾರು ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡು ವಾಪಸ್ ಬರಬೇಕು ಅನ್ಕೊಂಡಿದ್ದಾರೋ ಅವರು ಬರಬಹುದು ಎಂದು ಹೇಳಿದ್ದಾರೆ.

ಇನ್ನು ಅಮಿತ್ ಶಾ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಎಲ್ಲರೂ ವ್ಯತ್ಯಾಸ ಮರೆತು ಹೋಗಿ ಮುಂದೆ ಸಾಗಿ ಎಂದು ಅಮಿತ್ ಶಾ ಸೂಚಿಸಿದ್ದಾರೆ. ಹಳೆಯದೆಲ್ಲಾ ಮರೆತು ಒಟ್ಟಾಗಿ ಹೋಗಿ ಎಂದು ಕಿವಿಮಾತು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಯಾವತ್ತೂ ತಪ್ಪೇ ಮಾಡದ ಸಂಭಾವಿತ ಬಂದು ಬಿಟ್ಟ ಕರೆ ಕೊಡಲು.
    ಈತನ ಕರೆ ಬರಲೆಂದು ಚಾತಕಪಕ್ಷಿಯಂತೆ ಕಾಯುತ್ತಿರುವರೆಂದು ಕೊಂಡಿದ್ದಾನೆ ಚಕ್ರಾಧಿಪತ್ಯದ ಉತ್ತರಾಧಿಕಾರಿ….

LEAVE A REPLY

Please enter your comment!
Please enter your name here

error: Content is protected !!