ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಸ್ಯಾಂಡಲ್ ವುಡ್ ನ ಹಲವು ನಟ-ನಟಿಯರು ಅಪರ್ಣಾ ಅವರ ಅಂತಿಮ ದರ್ಶನ ಪಡೆದರು. ಇದೀಗ ನಟ ರಮೇಶ್ ಅರವಿಂದ್ ಅಂತಿಮ ನಮನ ಸಲ್ಲಿಸಿದ್ದಾರೆ. ತಮ್ಮ ಸಂತಾಪ ಸೂಚಿಸಿದ್ದಾರೆ.
ಅಪರ್ಣಾ ನಿರೂಪಣೆ ಮಾಡುವಾಗ ನನಗೆ ಯಾವಾಗಲೂ ಸಂತೋಷವಾಗುತ್ತಿತ್ತು. ಅಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು. ನಿರೂಪಣೆ ಕುರಿತು ಅವರ ಆತ್ಮವಿಶ್ವಾಸ ಅದ್ಭುತವಾಗಿತ್ತು. ಅಪರ್ಣಾರನ್ನು ಕಂಡರೆ ಗೌರವ. ಅವರು ಕನ್ನಡದ ಅಮೂಲ್ಯ ಆಸ್ತಿ ಎಂದು ನಟ ರಮೇಶ್ ಅರವಿಂದ್ ಹೇಳಿದರು.