ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳು ಮಾಡುವ ತುಂಟಾಟ ಒಂದಾ ಎರಡ. ಆದ್ರೂ ಮಕ್ಕಾಳಾಗಿದ್ದಾಗ ಎಲ್ಲರು ಮಾಡೋದು ಸಹಜ. ಇಲ್ಲೊಬ್ಬ ವಿದ್ಯಾರ್ಥಿ ಮಾಡಿದ ಕ್ರಿಯೇಟಿವ್ ತುಂಟಾಟ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಯೊಬ್ಬ ಖಾಲಿ ಐಫೋನ್ ಬಾಕ್ಸ್‌ನಲ್ಲಿ ತನ್ನ ಮಧ್ಯಾಹ್ನದ ಊಟ ತಂದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ, ಶಿಕ್ಷಕಿ ಈ ಬಾಕ್ಸ್‌ನಲ್ಲಿ ಏನಿದೆ ಎಂದು ಕೇಳಿದಾಗ, ವಿದ್ಯಾರ್ಥಿ ಶಾಂತವಾಗಿ “ಮ್ಯಾಮ್, ಲಂಚ್” ಎಂದು ಉತ್ತರಿಸಿದ್ದಾನೆ. ಬಾಕ್ಸ್ ತೆರೆಯುತ್ತಿದ್ದಂತೆ ಪರಾಠ ಕಣ್ಣಿಗೆ ಬಿದ್ದಿದ್ದು, ಟೀಚರ್ ಶಾಕ್ ಆಗಿದ್ದಾರೆ. ಇದನ್ನು ಯಾರು ಪ್ಯಾಕ್ ಮಾಡಿದ್ದು? ಇದು ಊಟದ ಬಾಕ್ಸ್ನಂತೆ ಕಾಣುತ್ತಿದೆಯೇ? ಎಂದು ಏರುಧ್ವನಿಯಲ್ಲಿ ಕೇಳಿದ್ದಾರೆ. ಆದರೆ ಹುಡುಗ ಶಾಂತವಾಗಿ “ಮೇಡಂ, ನಾನೇ ಅದನ್ನು ಪ್ಯಾಕ್ ಮಾಡಿದ್ದು” ಎಂದು ಉತ್ತರಿಸುತ್ತಾನೆ.
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೃಜನಾತ್ಮಕತೆಯ ಉದಾಹರಣೆ ಎಂದು ಹಲವು ಬಳಕೆದಾರರು ಮೆಚ್ಚಿದ್ದಾರೆ. ಕೆಲವರು “ಪ್ಲಾಸ್ಟಿಕ್ ಬದಲಾಗಿ ಐಫೋನ್ ಬಾಕ್ಸ್ ಬಳಕೆ, ಪರಿಸರ ಸ್ನೇಹಿ ಮತ್ತು ಹೊಸ ಐಡಿಯಾ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ವಿದ್ಯಾರ್ಥಿಯ ಕ್ರಿಯೇಟಿವಿಟಿಯನ್ನು ಹಿಂಸೆ ಮಾಡಬೇಡಿ, ಬದಲಿಗೆ ಶಿಕ್ಷಕರು ಮಾರ್ಗದರ್ಶನ ನೀಡಬೇಕು” ಎಂದಿದ್ದಾರೆ.

