ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೊನಾಲ್ಡ್ ಟ್ರಂಪ್ ವಿಧಿಸಿದ ತೆರಿಗೆ ಸುಂಕದಿಂದ ಪಾರಾಗಲು ಆಪಲ್ ಕಂಪನಿ ಭಾರತದಿಂದ 5 ವಿಮಾನದಷ್ಟು ಐಫೋನ್ ಮತ್ತು ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ.
ಟ್ರಂಪ್ ತೆರಿಗೆ ಸಮರ ಆರಂಭಿಸಿದ್ದು ವಿದೇಶದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲಿದ್ದ ಸುಂಕವನ್ನು ಹೆಚ್ಚಿಸಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿ ವಿದೇಶದಿಂದ ಆಮದಾಗುವ ವಸ್ತುಗಳ ಬೆಲೆ ಏರಿಕೆಯಾಗಲಿದೆ.
ವಸ್ತುಗಳ ಬೆಲೆ ಏರಿಕೆಯಿಂದ ಪಾರಾಗಲು ಆಪಲ್ ಕಂಪನಿ ಭಾರೀ ಪ್ರಮಾಣದಲ್ಲಿ ಐಫೋನ್ ಮತ್ತು ಇತರ ವಸ್ತುಗಳನ್ನು ಭಾರತದಿಂದ ರಫ್ತು ಮಾಡಿದೆ ಎಂದು ವರದಿಯಾಗಿದೆ.
ಭಾರತದ ಮೇಲೆ ಟ್ರಂಪ್ 26% ಚೀನಾದ ಮೇಲೆ 52%, ತೈವಾನ್ ಮೇಲೆ 32%, ವಿಯೆಟ್ನಾಂ ಮೇಲೆ 46% ತೆರಿಗೆ ವಿಧಿಸಿದ್ದಾರೆ. ಐಫೋನ್ ಅಮೆರಿಕ ಕಂಪನಿಯಾದರೂ ಬಹುತೇಕ ಐಫೋನ್‌ಗಳು, ಅದರ ಬಿಡಿಭಾಗಗಳು ಭಾರತ, ವಿಯೆಟ್ನಾಂ, ತೈವಾನ್, ಚೀನಾದಲ್ಲಿ ತಯಾರಾಗುತ್ತವೆ. ಹೀಗಾಗಿ ಈ ದೇಶಗಳಿಂದ ರಫ್ತಾಗುವ ಐಫೋನ್‌ಗಳೂ ದುಬಾರಿ ಆಗಲಿವೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಮೇಲೆ ವಿಧಿಸಿದ ಸುಂಕ ಕಡಿಮೆಯಿದೆ.