Thursday, September 4, 2025

ಇಂದು ಬೆಂಗಳೂರಿನಲ್ಲಿ ಆ್ಯಪಲ್ ಕಂಪನಿಯ ಮಾರಾಟ ಮಳಿಗೆ ಉದ್ಘಾಟನೆ, ಉತ್ಸಾಹದಲ್ಲಿ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಆ್ಯಪಲ್ ಐಪೋನ್ ಕಂಪನಿಯು ದೇಶದ ತನ್ನ 3ನೇ ಮಳಿಗೆಯನ್ನು ಇಂದು ಮಧ್ಯಾಹ್ನ 1 ಗಂಟೆಗೆ ಉದ್ಘಾಟಿಸಲಿದೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಮಾಲ್ ಆಫ್ ಏಷ್ಯಾದಲ್ಲಿ ಆ್ಯಪಲ್ ಐಪೋನ್ ಕಂಪನಿಯ ಮಳಿಗೆ ಉದ್ಘಾಟನೆಯಾಗಲಿದೆ.

ಮಳಿಗೆಯಲ್ಲಿ ಆ್ಯಪಲ್ ಕಂಪನಿಯ ಐಪೋನ್, ಐಪ್ಯಾಡ್, ಐ ಮ್ಯಾಕ್ ಸೇರಿದಂತೆ ಆ್ಯಪಲ್ ಕಂಪನಿಯ ಎಲ್ಲ ಉತ್ಪನ್ನಗಳು ಲಭ್ಯವಿರಲಿವೆ. ಗ್ರಾಹಕರು ಇಲ್ಲೇ ಆ್ಯಪಲ್ ಐಪೋನ್ ಅನ್ನು ನೇರವಾಗಿ ಆ್ಯಪಲ್ ಕಂಪನಿಯಿಂದಲೇ ಖರೀದಿ ಮಾಡಬಹುದು. 

ದೇಶದಲ್ಲಿ ಈಗಾಗಲೇ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಹಾಗೂ ದೆಹಲಿಯ ಸಾಕೇತ್​ನಲ್ಲಿ ಆ್ಯಪಲ್ ಐಪೋನ್ ಮಳಿಗೆ ಆರಂಭವಾಗಿದೆ. ಈಗ ದೇಶದ ಮೂರನೇ ಮಳಿಗೆಯನ್ನು ಬೆಂಗಳೂರಿನ ಹೆಬ್ಬಾಳದ ಮಾಲ್ ಆಫ್ ಏಷ್ಯಾದಲ್ಲಿ ಆರಂಭಿಸುತ್ತಿದೆ. ಮಾಲ್ ಆಫ್ ಏಷ್ಯಾದಲ್ಲಿ ಆ್ಯಪಲ್ ಕಂಪನಿಯ ಎಲ್ಲ ಉತ್ಪನ್ನಗಳ ಅನುಭವವನ್ನು ಗ್ರಾಹಕರು ಪಡೆದುಕೊಳ್ಳಬಹುದು.

ಐಫೋನ್ 16 ಸರಣಿಯ ಫೋನ್​ಗಳು, ಎಂ4 ಚಿಪ್ ಆಧರಿತ ಮ್ಯಾಕ್ ಬುಕ್ ಪ್ರೋ( ಪರ್ಸನಲ್ ಕಂಪ್ಯೂಟರ್) ಆ್ಯಪಲ್ ಟ್ಯಾಬ್ಲೆಟ್‌, 10ನೇ ಸರಣಿಯ ಆ್ಯಪಲ್ ವಾಚ್, ಆ್ಯಪಲ್ ಏರ್ ಪ್ಯಾಡ್, ಆ್ಯಪಲ್ ಏರ್ ಟ್ಯಾಗ್ ಹೊಸ ಮಳಿಗೆಗಳಲ್ಲಿ ಗ್ರಾಹಕರಿಗೆ ಖರೀದಿಗಾಗಿ ಸಿಗಲಿವೆ.

ಈ ಎಲ್ಲಾ ಉತ್ಪನ್ನಗಳನ್ನು ಮಾಲ್ ಆಫ್ ಏಷ್ಯಾದ ಮೊದಲ ಮಹಡಿಯ ಸ್ಟೋರ್ ನಲ್ಲಿ ಬಳಸಿ ನೋಡಿ, ನಂತರ ಖರೀದಿಸಬಹುದು. ಆನ್ ಲೈನ್ ಖರೀದಿಸಿದ ಉತ್ಪನ್ನಗಳನ್ನು ಈ ಹೊಸ ಮಳಿಗೆಯಿಂದ ಗ್ರಾಹಕರು ಪಡೆಯಬಹುದು. ಈ ಬಗ್ಗೆ ಗ್ರಾಹಕರು ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ