ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತಪಟ್ಟಿ ಪರಿಷ್ಕರಣೆಯ ವಿವಾದದ ನಡುವೆ ಇಲ್ಲಿನ ರೋಹ್ತಾಸ್‌ನಲ್ಲಿ ಬೆಕ್ಕಿನ ಹೆಸರಿನಲ್ಲಿ ವಸತಿ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬಿಹಾರದ ರೋಹ್ತಾಸ್ ಜಿಲ್ಲೆಯ ನಸ್ರಿಗಂಜ್ ಬ್ಲಾಕ್‌ನಲ್ಲಿ ವಸತಿ ಪ್ರಮಾಣಪ ನೀಡುವಂತೆ ಬೆಕ್ಕಿನ ಹೆಸರಿನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಲಾಗಿದೆ. ಅರ್ಜಿದಾರರ ಹೆಸರನ್ನು ಕ್ಯಾಟ್ ಕುಮಾರ್, ತಂದೆಯ ಹೆಸರನ್ನು ಕ್ಯಾಟಿ ಬಾಸ್ ಮತ್ತು ತಾಯಿಯ ಹೆಸರನ್ನು ಕಟಿಯಾ ದೇವಿ ಎಂದು ನೋಂದಾಯಿಸಲಾಗಿದೆ.
ಅರ್ಜಿದಾರರ ಫೋಟೋ ಎಂದು ಬೆಕ್ಕಿನ ಫೋಟೋವನ್ನು ಸರ್ಕಾರದ ವೆಬ್ಸೈಟ್ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸರ್ಕಾರದ ವ್ಯವಸ್ಥೆಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ರೋಹ್ತಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಿತಾ ಸಿಂಗ್ ಅವರ ಸೂಚನೆಯ ಮೇರೆಗೆ, ನಸ್ರಿಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.