ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮನೆಯ ಯಜಮಾನಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೋಂದಣಿ ಮಾಡಲು ಇಂದು ಅವಕಾಶ ಇರುವುದಿಲ್ಲ.
ಇಂದು ಭಾನುವಾರ ಆಗಿರುವುದರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೋಂದಣಿ ಇರುವುದಿಲ್ಲ. ಭಾನುವಾರ ರಜಾ ದಿನ ಹಿನ್ನೆಲೆಯಲ್ಲಿ ನೋಂದಣಿಯೂ ಇರುವುದಿಲ್ಲ.
ಶನಿವಾರವಾದ ನಿನ್ನೆ ಒಂದೇ ದಿನ 14,16,462 ಅರ್ಜಿ ನೋಂದಣಿಯಾಗಿದ್ದು, ಈ ಮೂಲಕ ನೊಂದಣಿ ಪ್ರಕ್ರಿಯೆ ಆರಂಭವಾದಾಗಿನಿಂದ ಮೂರು ದಿನದಲ್ಲಿ ರಾಜ್ಯಾದ್ಯಂತ 22,90,782 ಅರ್ಜಿಗಳು ಸಲ್ಲಿಕೆಯಾಗಿವೆ.