ಶಂಖಪುಷ್ಪದ ಎಲೆಗಳು, ಕಾಂಡಗಳು ಮತ್ತು ಬೇರುಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹಾಗೂ ಕೂದಲಿನ ಬೆಳವಣಿಗೆ ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಶಂಕಪುಷ್ಪದ ಎಣ್ಣೆಯನ್ನುಹೀಗೆ ತಯಾರು ಮಾಡಿ..
ಶಂಖ ಹೂವುಗಳು – 10, ತೆಂಗಿನ ಎಣ್ಣೆ – 1 ಕಪ್, ಮೆಂತ್ಯ – ಒಂದು ಟೀಸ್ಪೂನ್, ರೋಸ್ಮರಿ ಎಣ್ಣೆ – 1 ಟೀಸ್ಪೂನ್
ಒಂದು ಬಟ್ಟಲು ತೆಗೆದುಕೊಳ್ಳಿ. ಅದಕ್ಕೆ ರೋಸ್ಮರಿ ಎಣ್ಣೆಯನ್ನು ಹಾಕಬೇಕು. ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಶಂಖಪುಷ್ಪದ ದಳಗಳನ್ನು ಸೇರಿಸಿ. ಮಧ್ಯಮ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಕುದಿಸಿ. ಮೆಂತ್ಯ ಸೇರಿಸಿ ಇನ್ನೊಂದು 5 ನಿಮಿಷ ಕುದಿಸಿ. ಒಲೆ ಆಫ್ ಮಾಡಿದ ಬಳಿಕ ನೀವು ರೋಸ್ಮರಿ ಎಣ್ಣೆಯನ್ನು ಸೇರಿಸಬಹುದು. ಎಣ್ಣೆ ಸಂಪೂರ್ಣವಾಗಿ ತಣ್ಣಗಾದ ನಂತರ, ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ತುಂಬಿಸಿ ಸಂಗ್ರಹಿಸಿ.
ಕೂದಲಿನಿಂದ ತಲೆಹೊಟ್ಟು ತೆಗೆದುಹಾಕಲು, ನೆತ್ತಿ ಮತ್ತು ಕೂದಲಿನ ಎಳೆಗಳಿಗೆ ಎಣ್ಣೆ ಹಚ್ಚಿ. ನಿಮ್ಮ ಬೆರಳ ತುದಿಯಿಂದ 5 ನಿಮಿಷಗಳ ಕಾಲ ನಿಮ್ಮ ನೆತ್ತಿಯನ್ನು ನಿಧಾನವಾಗಿ ಮಸಾಜ್ ಮಾಡಿ. ನೀವು ಅದನ್ನು ಒಂದು ಗಂಟೆ ಅಥವಾ ರಾತ್ರಿಯಿಡೀ ಹಾಗೆಯೇ ಬಿಟ್ಟು ಸೌಮ್ಯವಾದ ಶಾಂಪೂ ಬಳಸಿ ತೊಳೆಯಬಹುದು. ಇದನ್ನು ವಾರಕ್ಕೊಮ್ಮೆಯಾದರೂ ಮಾಡಿ.