ಪ್ರಧಾನಿ ಸ್ಫೂರ್ತಿಯ ಮಾತುಗಳಿಗೆ ಪಾಕ್‌ನಿಂದ ಕೇಳಿಸಿತು ಶಹಬ್ಬಾಸ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ ಕುಸ್ತಿಯ ಸೆಮಿಫೈನಲ್‌ನಲ್ಲಿ ಸಾಕಷ್ಟು ಕಠಿಣ ಹೋರಾಟ ನಡೆಸಿಯೂ ಫೈನಲ್ ತಲುಪಿ, ಚಿನ್ನದ ಪದಕ ಗೆಲ್ಲುವುದು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಟ್ಟ ಕಂಚಿನ ಪದಕ ಗೆದ್ದ ಭಾರತದ ಕುಸ್ತಿಪಟು ಪೂಜಾ ಗೆಹ್ಲೋಟ್‌ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಸ್ಫೂರ್ತಿ ತುಂಬಿದ ಮಾತುಗಳನ್ನಾಡಿರುವುದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ, ಜೊತೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಧಾನಿಯ ಕಾಳಜಿಯನ್ನು ಭಾರತೀಯರು ಮಾತ್ರವಲ್ಲ, ಪಾಕಿಸ್ತಾನಿಯರು ಕೂಡ ಮೆಚ್ಚಿದ್ದು, ತಮ್ಮ ಆಡಳಿತಗಾರರು ಕ್ರೀಡಾಪಟುಗಳ ಕಡೆ ತೋರುವ ಅಸಡ್ಡೆಯನ್ನು ಅವರು ಇದೇ ವೇಳೆ ಪ್ರಶ್ನಿಸಿದ್ದಾರೆ. ತಮ್ಮ ದೇಶದ ಅಥ್ಲೀಟ್‌ಗಳು ಪದಕಗಳನ್ನು ಗೆಲ್ಲುತ್ತಿರುವ ಬಗ್ಗೆ ರಾಜಕಾರಣಿಗಳಿಗೆ ಗೊತ್ತೇ ಇಲ್ಲ ಎನಿಸುತ್ತದೆ ಎಂದೂ ಟೀಕಿಸಿದ್ದಾರೆ.

ಪಾಕಿಸ್ತಾನದ ಪತ್ರಕರ್ತ ಶಿರಾಜ್ ಹಸನ್, ಮೋದಿ ಅವರ ನಡೆಯನ್ನು ಮೆಚ್ಚಿದ್ದು, ಜೊತೆಗೆ ತಮ್ಮ ದೇಶದ ನಾಯಕರ ವರ್ತನೆಯನ್ನೂ ಹೇಳಿಕೊಂಡಿದ್ದಾರೆ.
ಪದಕ ಗೆದ್ದು, ಚಿನ್ನ ಗೆಲ್ಲಲು ಸಾಧ್ಯವಾಗದ್ದಕ್ಕೆ ದುಃಖ ಹೊರಹಾಕಿದ ಕ್ರೀಡಾಳುವಿಗೆ ಖುದ್ದು ಪ್ರಧಾನಿ ಧೈರ್ಯತುಂಬಿದ್ದಾರೆ. ಪಾಕಿಸ್ತಾನದ ಪ್ರಧಾನಿ ಅಥವಾ ಅಧ್ಯಕ್ಷರಿಂದ ಅಂತಹ ಸಂದೇಶವನ್ನು ನಾವು ಎಲ್ಲಾದರೂ ಕಂಡಿದ್ದೇವೆಯೇ? ಪಾಕಿಸ್ತಾನದ ಅಥ್ಲೀಟ್‌ಗಳು ಪದಕ ಗೆಲ್ಲುತ್ತಿರುವುದಾದರೂ ಅವರಿಗೆ ಗೊತ್ತಿದೆಯೇ? ಎಂದು ಕುಟುಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!