ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಟ ಪುನೀತ್ ರಾಜ್‌ಕುಮಾರ್ ಅವರ ಮಗಳು ಧೃತಿ ರಾಜ್‌ಕುಮಾರ್ ಅಮೆರಿಕದ ನಂ. 1 ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ.
ನಟ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮನ್ನು ಅಗಲಿ ಹೋದ ಸಮಯದಲ್ಲಿ ಧೃತಿ ಅಮೆರಿಕದಲ್ಲಿ ಓದುತ್ತಿದ್ದರು. ಬರಸಿಡಿಲಿನಂತೆ ಎರಗಿದ ಅಪ್ಪನ ಸಾವಿನ ಸುದ್ದಿ ಕೇಳಿ ಭಾರತಕ್ಕೆ ಬಂದು ಅಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಅನುವಾರ್ಯವಾಗಿ ಮತ್ತೆ ಅಮೆರಿಕಕ್ಕೆ ಹೋಗಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. ಇದೀಗ ತಂದೆಗೆ ಅವರು ಹೆಮ್ಮೆ ತರಿಸುವಂತಹ ಕೆಲಸ ಮಾಡಿದ್ದಾರೆ.
Parsons School of Design ಅಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪುತ್ರಿ ಧೃತಿ ಪದವಿ ಪಡೆದಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಧ್ರುತಿಯ ಪೋಸ್ಟ್‌ಗೆ ಇದೀಗ ನಟ ಅವರ ದೊಡ್ಡಪ್ಪ ಶಿವರಾಜ್‌ಕುಮಾರ್ ಅವರು ಖುಷಿ ಹಂಚಿಕೊಂಡಿದ್ದಾರೆ.
Hi ಟೋಟೊ, Congratulations! ಈ ದಿನ ಬಹಳ ವಿಶೇಷವಾದ ದಿನ, ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ದಿನ. You made me and dodappa very proud. Lots of good memories with ಅಪ್ಪು, ಅಶ್ವಿನಿ, you and ನುಕ್ಕಿ. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ, ನಿನ್ನಲಿಯೇ ಅಪ್ಪು. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ. Congratulations once again on your graduation ಟೋಟೊ ಏನು ಅಭಿನಂದಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರ ಮಗಳು ಧೃತಿ ಸಾಧನೆಗೆ ಅನೇಕರು ಮೆಚ್ಚುಗೆ ಪಡೆದಿದ್ದಾರೆ. ಧ್ರುತಿ ಅಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಖುಷಿ ಹಂಚಿಕೊಂಡಿದ್ದಾರೆ.
ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್, ನ್ಯೂಯಾರ್ಕ್ ನಗರದ ದಿ ನ್ಯೂ ಸ್ಕೂಲ್‌ನ ಭಾಗವಾಗಿದ್ದು, ಯುನೈಟೆಡ್ ಸ್ಟೇಟ್ಸ್‌ನ ನಂಬರ್ ಒನ್ ಡಿಸೈನ್ ಸ್ಕೂಲ್ ಎಂದು QS ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ 2022ರಲ್ಲಿ 5 ವರ್ಷಗಳಿಂದ ಮನ್ನಣೆ ಪಡೆದಿತ್ತು. 1896 ರಲ್ಲಿ ವಿಲಿಯಂ ಮೆರಿಟ್ ಚೇಸ್ ಸ್ಥಾಪಿಸಿದ ಈ ಶಾಲೆ, 1941 ರಲ್ಲಿ ಫ್ರಾಂಕ್ ಅಲ್ವಾ ಪಾರ್ಸನ್ಸ್ ಹೆಸರಿನಲ್ಲಿ ಮರುನಾಮಕರಣ ಆಯ್ತು. ಕಲೆ, ವಿನ್ಯಾಸ, ಸಾಮಾಜಿಕ ನ್ಯಾಯ, ಸಮರ್ಥನೀಯತೆಯ ಮೇಲೆ ಕೇಂದ್ರೀಕರಣ ಆಗಿತ್ತು.