ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನರ್‌ರಚನೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಈ ಬಾರಿ ತಮಗೆ ಸಚಿವ ಸ್ಥಾನ ಸಿಗುವ ಬಗ್ಗೆ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಯಾದಾಗ ತಮಗೆ ಸಚಿವ ಸ್ಥಾನ ಲಭಿಸುವುದು ಖಚಿತ ಎಂದು ಶಿವಲಿಂಗೇಗೌಡರು ತಿಳಿಸಿದ್ದಾರೆ.
“ಸಂಪುಟ ಪುನರ್ ರಚನೆ ಆದಾಗ ನನಗೆ ಸಚಿವ ಸ್ಥಾನ ನೀಡುವುದಾಗಿ ಎಲ್ಲಾ ಹಿರಿಯ ನಾಯಕರು ಭರವಸೆ ನೀಡಿದ್ದಾರೆ. ವಿಸ್ತರಣೆ ಯಾವಾಗ ಆಗುತ್ತದೆ ಎಂಬ ನಿಖರ ಮಾಹಿತಿ ನನಗಿಲ್ಲ, ಆದರೆ ಆದಾಗ ನನಗೆ ಸ್ಥಾನ ಸಿಗುವ ವಿಶ್ವಾಸವಿದೆ,” ಎಂದು ನುಡಿದರು.

