ಮತ್ತೆ ಭಾರತಕ್ಕೆ ಚಿನ್ನ ತಂದಳು ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ 2023ನೇ ಸಾಲಿನ ಪ್ಯಾರಾ ಆರ್ಚರಿ ಚಾಂಪಿಯನ್ಶಿಪ್‌ನಲ್ಲಿ ಭಾರತದ ಶೀತಲ್ ದೇವಿ ಮತ್ತೆ ಚಿನ್ನ ಬಾಚಿದ್ದಾರೆ. ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತಾದರೂ, ಗುಂಪು ಸ್ಪರ್ಧೆಯಲ್ಲಿ ಶೀತಲ್ ದೇವಿ ಭಾರತವು ಎರಡು ಚಿನ್ನದ ಪದಕಗಳನ್ನು ಗೆಲ್ಲುವುದಕ್ಕೆ ಕಾರಣರಾಗಿದ್ದಾರೆ.

ಶೀತಲ್ ದೇವಿಯವರೊಂದಿಗೆ ರಾಕೇಶ ಕುಮಾರ್ ಅವರ ಸಾಧನೆಯೂ ಸೇರಿಕೊಂಡು ಭಾರತವು ಬಿಲ್ಲುಗಾರಿಕೆ ವಿಭಾಗದಲ್ಲಿ ಒಟ್ಟೂ 7 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿ ನಿಲ್ಲುವುದು ಸಾಧ್ಯವಾಗಿದೆ. ದಕ್ಷಿಣ ಕೊರಿಯಾ (5) ಮತ್ತು ಚೀನಾ (4) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದಿವೆ.

ಕಳೆದ ತಿಂಗಳಷ್ಟೇ ಚೀನಾದಲ್ಲಿ ನಡೆದಿದ್ದ ಏಷ್ಯನ್ ಪ್ಯಾರಾ ಗೇಮ್’ನಲ್ಲಿ ಚಿನ್ನ ಗೆಲ್ಲುವ ಮೂಲಕ ಶೀತಲ್ ದೇವಿ ಭಾರತದ ಮನೆಮಾತಾಗಿದ್ದರು. ಜಮ್ಮು-ಕಾಶ್ಮೀರದ ಕಿಶ್ತಾವರ ಜಿಲ್ಲೆಯ ಬಡಕುಟುಂಬದಿಂದ ಬಂದಿರುವ 16ರ ಹರೆಯದ ಶೀತಲ್ ದೇವಿ ಕೈಗಳೇ ಇಲ್ಲದಿದ್ದರೂ ಬಿಲ್ವಿದ್ಯೆಯಲ್ಲಿ ಪರಿಣತಿ ಸಾಧಿಸಿ ಜಗತ್ತನ್ನು ನಿಬ್ಬೆರಗಾಗಿಸಿರುವ ಪ್ರತಿಭೆ.

ಕ್ರೀಡೆಯ ಆಚೆಗೂ ಸ್ಫೂರ್ತಿಯ ಸೆಲೆಯಂತಿರುವ ಶೀತಲ್ ದೇವಿ, ಸದಾ ಕೊರತೆಗಳ ಕಾರಣವನ್ನೇ ಕೊಟ್ಟು ಸಾಧನೆಯಿಂದ ವಿಮುಖರಾಗುವ ಯಾರಿಗೇ ಆಗಲಿ ಪ್ರೇರಣೆ ನೀಡಬಲ್ಲರು.

ತೈಲ್ಯಾಂಡಿನ ಬ್ಯಾಂಕಾಕಿನಲ್ಲಿ ನಡೆದ ಬಿಲ್ಲುಗಾರಿಕೆಯ ಗುಂಪು ಸ್ಪರ್ಧೆ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ಶೀತಲ್ ದೇವಿಯವರ ಬಂಗಾರದ ಗುರಿಗಳು ಹೀಗಿವೆ ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!