March 31, 2026
Tuesday, March 31, 2026
spot_img

ರೋಗಿಗಳನ್ನು ಬಿಟ್ಟು, ಜನರನ್ನೇ ಕುರಿಗಳ ಥರ ತುಂಬಿಸಿ ಬ್ಯುಸಿನೆಸ್‌ ಮಾಡ್ತಿದೆಯಾ ಆಂಬುಲೆನ್ಸ್‌ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಷ್ಟೋ ಬಾರಿ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಕ್ಕರೆ ಜನರ ಪ್ರಾಣ ಉಳಿಯುತ್ತದೆ. ಅದೇ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದೇ ಹೋದರೆ ಪ್ರಾಣವೂ ಹೋಗುತ್ತಿದೆ. ಇಷ್ಟೊಂದು ಪ್ರಾಮುಖ್ಯತೆ ಇರುವ ಆ್ಯಂಬುಲೆನ್ಸ್ ಲೋಕಲ್‌ ಬಸ್‌ನಂತೆ ಆದರೆ?

ರೋಗಿಗಳ ತುರ್ತು ಚಿಕಿತ್ಸೆಗೆ ಇರುವ ಆ್ಯಂಬುಲೆನ್ಸ್‌ಗಳನ್ನು ಜನರ ಸಾಗಾಟಕ್ಕೆ ಬಳಸಿರುವ ಆರೋಪ ಎದುರಾಗಿದೆ. ಗದಗದ ಜಿಮ್ಸ್‌ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ತಲೆಗೆ ಇಷ್ಟು ಎಂದು ಟಿಕೆಟ್‌ ಪಡೆದು ಜನರನ್ನು ಡ್ರಾಪ್‌ ಮಾಡಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗಿದ್ದು, ಹತ್ತಿಪ್ಪತ್ತು ಜನ ಆ್ಯಂಬುಲೆನ್ಸ್ ಹತ್ತುವುದು ಕಾಣಿಸಿದೆ. ಇದು ಜನರಿಗೆ ಕೋಪ ತರಿಸಿದೆ. ಯಾವ ವಾಹನ ಯಾವುದಕ್ಕೆ ಬಳಸಬೇಕೋ ಅದಕ್ಕೆ ಬಳಸುವುದು ಒಳಿತು. ಅವಶ್ಯ ಇದ್ದಾಗ ಆ್ಯಂಬುಲೆನ್ಸ್ ಸಿಗದಿದ್ದರೆ ಜನ ಮೃತಪಡುತ್ತಾರೆ. ಅಲ್ಲದೇ ಆ್ಯಂಬುಲೆನ್ಸ್ಗಳನ್ನು ಸ್ಯಾನಿಟೈಸ್‌ ಮಾಡಿಲ್ಲ ಎಂದಾದರೆ ಇನ್ಫೆಕ್ಷನ್‌ ಹರಡುವ ಸಾಧ್ಯತೆ ಕೂಡ ಇದೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !