ಡೈಪರ್ ರ‍್ಯಾಷಸ್‌ನಿಂದ ಸಾಕಷ್ಟು ತೊಂದರೆಗಳಾಗುತ್ತವೆ. ಇದು ಚಿಕ್ಕಮಕ್ಕಳಲ್ಲಿ ಸಾಮಾನ್ಯ. ಇದರಿಂದ ಕೆಂಪು ಗುಳ್ಳೆಗಳಾಗುತ್ತವೆ. ಡೈಪರ್ ರ‍್ಯಾಷಸ್ ತಪ್ಪಿಸುವುದು ಹೇಗೆ?
- ಡೈಪರ್ ರ‍್ಯಾಷಸ್ ಬರೋದು ಯಾಕೆ?
ಟೈಟ್ ಆದ ಡೈಪರ್ ಹಾಕುವುದರಿಂದ
ಸೆನ್ಸಿಟಿವ್ ಸ್ಕಿನ್
ಆಂಟಿಬಯೋಟಿಕ್ಸ್ ಬಳಸುತ್ತಿದ್ದರೆ
ಹೊಸ ಆಹಾರ ಕ್ರಮ ಜಾರಿಯಾದಾಗ - ಡೈಪರ್ ರ‍್ಯಾಷಸ್ ತಡೆಗಟ್ಟುವುದು ಹೀಗೆ..
ರ‍್ಯಾಷಸ್ ಆದ ಜಾಗ ಯಾವಾಗಲೂ ಸ್ವಚ್ಛವಾಗಿರಲಿ ಹಾಗೇ ಒಣಗಿರಲಿ.
ಡೈಪರ್‌ಗಳನ್ನು ಆಗಾಗ್ಗೇ ಬದಲಿಸಿ, ತುಂಬ ಸಮಯದವರೆಗೂ ಡೈಪರ್ ಹಾಗೇ ಬಿಟ್ಟರೆ ಒದ್ದೆಗೆ ರ‍್ಯಾಷಸ್ ಆಗುತ್ತದೆ.
ಬಟ್ಟೆಯ ಡೈಪರ್ ಹಾಕುತ್ತಿದ್ದರೆ, ಕೆಲ ಸಮಯ ಅದನ್ನು ನಿಲ್ಲಿಸಿ ಡಿಸ್ಪೋಸಬಲ್ ಡೈಪರ್ ಹಾಕಿ. ಬಟ್ಟೆಯ ಒದ್ದೆಯಿಂದ ರ‍್ಯಾಷಸ್ ಹೆಚ್ಚಾಗುವ ಸಾಧ್ಯತೆ ಇದೆ.
ಮಕ್ಕಳ ಡೈಪರ್ ಅಳತೆ ಮೇಲೆ ಗಮನ ಇರಲಿ, ಚಿಕ್ಕದು ಅಥವಾ ದೊಡ್ಡದು ಯಾವುದೂ ಬೇಡ.
ಆಗಾಗ ಡೈಪರ್ ರ‍್ಯಾಶ್ ಕ್ರೀಮ್ ಬಳಸಿ
ಆಲೋವೆರಾ ಜೆಲ್ ಬಳಸಬಹುದು.
ಯಾವಾಗಲೂ ಡೈಪರ್ ಹಾಕಿರದೆ ಆಗಾಗ ಮಕ್ಕಳನ್ನು ಗಾಳಿಗೆ ಹಾಗೇ ಬಿಡಿ