PARENTING| ಮನೆಯಲ್ಲಿ ಟೀನೇಜರ್ಸ್‌ ಇದ್ದಾರಾ? I love you ಹೇಳುವ ಜತೆ ಹೀಗೆ ಮಾಡಿ ಕೂಡ ಪ್ರೀತಿ ತೋರಿಸ್ಬೋದು..

ಟೀನೇಜರ್ಸ್ ನೊಂದಿಗೆ ಒಡನಾಟ ಹೆಚ್ಚಿಸುವುದು ಸಣ್ಣ ಮಕ್ಕಳಿಗಿಂತ ಕಠಿಣವಾಗಬಹುದು. ಯಾಕಂದ್ರೆ ಈ ವಯಸ್ಸಿನವರು ಸ್ವಾಭಾವಿಕವಾಗಿ ಚಾಂಚಲ್ಯದಿಂದ ಕೂಡಿರುತ್ತಾರೆ. ಆದರೆ ಅವರು ತೋರಿಸಿಕೊಳ್ಳದಿದ್ದರು, ಪ್ರೀತಿಯ ಅಗತ್ಯವಿದೆ. ಅವರೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳಲು ಈ ಸರಳ ಮಾರ್ಗಗಳನ್ನು ಅನುಸರಿಸಬಹುದು.

ಅವರಿಗೆ ಫನ್ನಿ ಮೆಸೇಜಸ್ ಗಳನ್ನು ಕಳಿಸಿ.

ಹಂಚಿಕೊಳ್ಳಬಹುದಾದ ಚಿಕ್ಕ ಉಡುಗೊರೆ ನೀಡಿ.

ಗಾಡಿಯಲ್ಲಿ ಅವರಿಗಿಷ್ಟವಾದ ಸಂಗೀತವನ್ನು ಆಯ್ಕೆಮಾಡಲು ಬಿಡಿ.

ಅವರು ಎಲ್ಲಿ ಊಟ, ಶಾಪಿಂಗ್ ಅಥವಾ ಇತರ ಚಟುವಟಿಕೆಗಳು ಮಾಡಲು ಇಚ್ಛಿಸುತ್ತಾರೋ, ಅವರ ಆಯ್ಕೆ ಪ್ರಕಾರ ಅನುಸರಿಸಿ.

ಅವರು ಓದುವ ಪುಸ್ತಕಗಳನ್ನು ನೀವೂ ಓದಿ, ಅದನ್ನು ಅವರೊಂದಿಗೆ ಚರ್ಚಿಸಿ.

ಸಾಮಾಜಿಕ ಮಾಧ್ಯಮದಲ್ಲಿ ಅವರ ಬಗ್ಗೆ ಪ್ರೀತಿಯನ್ನು ತೋರಿಸುವ ಪೋಸ್ಟ್ ಗಳನ್ನು ಹಾಕಿ.

ಅವರಿಗೆ ಮುಖ್ಯವಾಗಿರುವ ವಿಷಯಗಳಲ್ಲಿ ಅವರಿಗೆ ಪ್ರೋತ್ಸಾಹ ನೀಡಿ.

ನಿಮ್ಮ ಟೀನೇಜರ್ಸ್ ಮೇಲೆ ವಿಶ್ವಾಸವನ್ನು ವ್ಯಕ್ತಪಡಿಸಿ.

ನೀವು ಅವರ ವಯಸ್ಸಿನಲ್ಲಿ ಮಾಡಿದ ತಪ್ಪುಗಳ ಬಗ್ಗೆ ಹಂಚಿಕೊಳ್ಳಿ.

“ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳಲು ಮರೆಯಬೇಡಿ.

ಈ ತೋರಿಕೆಗಳು ಟೀನೇಜರ್ಸ್ ನೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸಲು ಸಹಾಯ ಮಾಡುತ್ತವೆ ಮತ್ತು ನಿಮ್ಮ ಪ್ರೀತಿಯ ಭರವಸೆಯನ್ನು ಅವರಿಗೆ ನೀಡುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!