ಬೆಂಗಳೂರು ನಗರವು ತಂತ್ರಜ್ಞಾನ ನಗರಿಯಾಗಿರುವಷ್ಟೇ ಆಹಾರ ಪ್ರಿಯರಿಗೂ ಹವ್ಯಾಸಿ ತಾಣವಾಗಿದೆ. ಇಲ್ಲಿ ಕಾಫಿ, ಕೇಕ್, ದೋಸೆ ಎಲ್ಲವೂ ಸಿಗುತ್ತೆ. ಆದರೆ, ಒಂದು ವಿಶಿಷ್ಟ ಅನುಭವವ ಅಂದ್ರೆ ಅಯ್ಯಂಗಾರ್ ಶೈಲಿಯ ಬೇಕರಿಗಳಲ್ಲಿ ಸಿಗುವ ಪಫ್, ಬನ್, ಹನಿ ಕೇಕ್‌ಗಳ ರುಚಿ. ಸಿಟಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿ ಕೇವಲ ಸೈಟ್‌ಸೀಯಿಂಗ್ ಮಾತ್ರವಲ್ಲ, ಈ ಹಳೆಯ ಶೈಲಿಯ ಬೇಕರಿಗಳ ಟೇಸ್ಟ್ ಮಾಡೋಕು ಬರ್ತಾರೆ.
ಜಯನಗರದ ಐಯ್ಯಂಗಾರ್ ಬೇಕರಿ:
ಜಯನಗರ 4ನೇ ಬ್ಲಾಕ್‌ನಲ್ಲಿ ನೆಲೆಸಿರುವ ಈ ಬೇಕರಿ ಯಾವಾಗಲೂ ಗ್ರಾಹಕರಿಂದ ತುಂಬಿರುತ್ತದೆ. ಹನಿ ಕೇಕ್ ಮತ್ತು ದಿಲ್ ಪಸಂದ್ ಇಲ್ಲಿ ತುಂಬಾ ಹಿಟ್ ಆದ ತಿನಿಸುಗಳಾಗಿ ಉಳಿದಿವೆ.
ವಿ.ಬಿ. ಬೇಕರಿ, ವಿವಿ ಪುರಂ:
1960ರಿಂದ ಕಾರ್ಯನಿರ್ವಹಿಸುತ್ತಿರುವ ಈ ಬೇಕರಿಯು ಕಾಂಗ್ರೆಸ್ ಬನ್ ಹುಟ್ಟಿದ ಸ್ಥಳವಾಗಿದೆ. ಸ್ಪೈಸಿ ಖಾರ ಬನ್, ಮಸಾಲ ಬ್ರೆಡ್, ಹನಿ ಕೇಕ್‌ಗಳಿಗೆ ಇಲ್ಲಿ ಅಪಾರ ಬೇಡಿಕೆ ಇದೆ.
ಓಜಿ ವಾರಿಯರ್ ಅಂಡ್ ಸನ್ಸ್, ರಾಜಾಜಿನಗರ:
ಇಲ್ಲಿನ ತಯಾರಿಕೆ ಶುದ್ಧತೆಗೆ ಸಾಕ್ಷಿಯಾಗಿದೆ. ಯಾವುದೇ ಸಂರಕ್ಷಣಾ ಪದಾರ್ಥವಿಲ್ಲದೆ ಹಳೆಯ ವಿಧಾನದಲ್ಲಿ ತಯಾರಾಗುವ ಬಟರ್ ಕುಕೀಸ್, ಬಿಸಿ ಬ್ರೆಡ್‌ಗಳು ಅದ್ಭುತ ರುಚಿಯನ್ನು ನೀಡುತ್ತವೆ.
ಶ್ರೀ ಜಯಲಕ್ಷ್ಮೀ ಬೇಕರಿ, ಶಾಂತಿನಗರ:
ಫ್ರೆಶ್ ಬನ್, ವೆಜ್ ಪಫ್ಸ್, ಬಟರ್ ಬಿಸ್ಕಟ್ಸ್, ಆಪಲ್ ಕೇಕ್‌ಗಳಿಗಾಗಿ ಜನಪ್ರಿಯ. ಇಲ್ಲಿ ಸಿಗುವ ಬ್ರೆಡ್‌ಗಳು ದಿನವೂ ತಾಜಾ ಮತ್ತು ನಾಚುರಲ್ ಫ್ಲೇವರ್‌ನಿಂದ ತಯಾರಾಗುತ್ತವೆ.
ಎಲ್.ಜೆ. ಅಯ್ಯಂಗಾರ್ ಬೇಕರಿ, ಮಲ್ಲೇಶ್ವರಂ:
80ರ ದಶಕದಿಂದಲೂ ಜನಪ್ರಿಯವಾಗಿರುವ ಈ ಬೇಕರಿಯಲ್ಲಿ ಕ್ರಿಸ್ಪಿ ಖಾರ ಬಿಸ್ಕಟ್, ಕ್ರೀಮಿ ವೆಜ್ ಪಫ್ಸ್, ವೆನಿಲ್ಲಾ ಸ್ಪಾಂಜ್ ಕೇಕ್‌ಗಳು ಯಾವಾಗಲೂ ಸಿಗುವ ರುಚಿಕರ ತಿನಿಸುಗಳು.
ಬನ್ ವರ್ಲ್ಡ್, ಮಲ್ಲೇಶ್ವರಂ:
1995ರಿಂದ ಅಯ್ಯಂಗಾರ್ ಶೈಲಿಯ ತಿನಿಸುಗಳತ್ತ ಗಮನ ಸೆಳೆದ ಈ ಬೇಕರಿಯ ಮಾವಾ ಕೇಕ್, ಎಗ್‌ಲೆಸ್ ಕೇಕ್, ಫಿಲ್ಟರ್ ಕಾಫಿ ಸೇರಿದಂತೆ ಹಲವಾರು ತಿನಿಸುಗಳು ಸಾಕಷ್ಟು ಜನಪ್ರಿಯ.
ಶ್ರೀನಿವಾಸ ಬ್ರಾಹ್ಮಿಣ್ಸ್ ಬೇಕರಿ, ಬಸವನಗುಡಿ:
1958ರಲ್ಲಿ ಸ್ಥಾಪನೆಯಾದ ಈ ಹೆರಿಟೇಜ್ ಬೇಕರಿಯು ತಲತಲಾಂತರಗಳಿಂದ ಆಪ್ತ ಬಂಧದ ರುಚಿಯನ್ನು ಕಾಪಾಡಿಕೊಂಡು ಬಂದಿದೆ. ಬಟರಿ ಬನ್, ಕ್ರಂಚಿ ರಸ್ಕ್ಸ್, ಆಪಲ್ ಕೇಕ್, ಕೋಕನಟ್ ಬಿಸ್ಕಟ್‌ಗಳು ಇಲ್ಲಿಯ ಜನಪ್ರಿಯ ಉತ್ಪನ್ನಗಳು.
ಅಯ್ಯಂಗಾರ್ ಶೈಲಿಯ ಸಿಂಪಲ್ ಮತ್ತು ಕ್ಲಾಸಿಕ್ ರುಚಿಗಳಿಗೆ ಈ ಬೇಕರಿಗಳು ನಂಬರ್ ಒನ್ ಸ್ಪಾಟ್.