PARENTING | ಈಗಷ್ಟೇ ʼನ್ಯೂ ಪೇರೆಂಟ್ಸ್‌ʼ ಆಗಿದ್ದೀರಾ? ಹಾಗಿದ್ರೆ ಇದನ್ನು ಓದಿ..

ಒಂಬತ್ತು ತಿಂಗಳಿನಿಂದ ಕಾದ ಘಳಿಗೆ ಇಂದು ಬಂದೇ ಬಿಟ್ಟಿದೆ. ಮನೆಯಲ್ಲಿ ಪುಟಾಣಿ ಮಗುವಿನ ಅಳು ಕೇಳುತ್ತಿದೆ. ಆದರೆ ಪೋಷಕರಿಗೆ ಅದೇನೋ ಆತಂಕ, ಮಗು ಆಕ್ಷಿ ಎಂದರೂ ಚಿಂತೆ, ಕೈ ಎತ್ತಿದರೆ ಯಾಕೋ ಮಗು ಕೈ ಎತ್ತಿದೆ, ಮುಖ ಕಿವುಚಿದರೆ ಮಗು ಯಾಕೋ ಮುಖ ಕಿವುಚುತ್ತಿದೆ ಎನ್ನುವ ಭಯ.. ಇದರ ನಡುವೆಯೂ ಸಾಕಷ್ಟು ವಿಷಯಗಳು ಹೊಸತು ಎನಿಸುತ್ತವೆ, ಕೆಲವು ವಿಷಯಗಳು ನೋವು ತರುತ್ತವೆ. ಪೋಷಕರಾಗೋಕೆ ಎಷ್ಟೇ ತಯಾರಿ ಇದ್ದರೂ ಸಾಲೋದಿಲ್ಲ.. ಈಗಷ್ಟೇ ಪೋಷಕರಾಗಿದ್ದರೆ ಇದನ್ನು ಓದಿ..

ಈ ಪೋಷಕರಲ್ಲಿ ನೀವು ಒಬ್ಬರಾದರೆ ಇದನ್ನು ಓದಿ..

  • ಒತ್ತಡಕ್ಕೆ ರೆಡಿಯಾಗಿ, ಇದು ಸಾಮಾನ್ಯವಾಗಿ ನಿಮ್ಮ ಜೊತೆಯೇ ಇರಲಿದೆ. ಮಗು ವಿಷಯಕ್ಕೆ ಸಾಕಷ್ಟು ಭಿನ್ನಾಭಿಪ್ರಾಯ ಬರಲಿವೆ.
  • ನಿಮ್ಮ ರೀತಿಯೇ ಈಗಷ್ಟೇ ಪೋಷಕರಾದವರ ಜೊತೆ ಮಾತನಾಡಿ. ಅವರ ಮಗು ಹೇಗೆಲ್ಲಾ ಮಾಡುತ್ತದೆ ಕೇಳಿ ತಿಳಿದುಕೊಳ್ಳಿ.
  • ನಾನು ಸ್ವಾವಲಂಬಿ, ಎಲ್ಲಾ ಕೆಲಸ ನಾನೇ ಮಾಡುತ್ತೇನೆ ಎನ್ನುವ ಭಾವನೆ ಸದ್ಯಕ್ಕೆ ಬಿಟ್ಟುಬಿಡಿ, ಸಹಾಯಕ್ಕಾಗಿ ಕೈ ಚಾಚಿ.
  • ನಿಮ್ಮ ಮೇಲೆ ನಂಬಿಕೆ ಇಡಿ, ಮಗುವಿಗೆ ಏನು ಬೆಸ್ಟ್ ನಿಮಗೆ ಖಂಡಿತಾ ಗೊತ್ತಿದೆ.
  • ಕೇಳಿ ತಿಳಿಯಿರಿ, ಸಾಕಷ್ಟು ವಿಷಯಗಳ ಬಗ್ಗೆ ನಿಮಗೆ ಡೌಟ್ಸ್ ಇರಬಹುದು, ವೈದ್ಯರನ್ನು ಕೇಳಿ ತಿಳಿದುಕೊಳ್ಳಿ.
  • ಮಗುವಿನ ಪ್ರತಿ ದಿನವನ್ನು ಎಂಜಾಯ್ ಮಾಡಿ, ಯಾವಾಗ ದೊಡ್ಡವರಾಗಿ ಬಿಡುತ್ತಾರೋ ಗೊತ್ತಾಗೋದೇ ಇಲ್ಲ.
  • ನೀವು ನಿಮ್ಮ ಪಾರ್ಟ್‌ನರ್ ಸಮಾನವಾಗಿ ಕೆಲಸ ಮಾಡಿ, ಮಗುವಿನ ಕಾಳಜಿ ಮಾಡಿ.
  • ಅತಿಯಾದ ಫೋನ್‌ ಬಳಕೆ ಅಥವಾ ಹೆಚ್ಚು ಜನರ ಬಳಿ ಸಲಹೆ ಕೇಳಬೇಡಿ, ತಲೆ ಕೆಡುತ್ತದೆ.
  • ದೊಡ್ಡವರು ಹೇಳುವ ಮಾತು ಸೂಕ್ತವೋ ಅಲ್ಲವೋ ಅದರ ಬಗ್ಗೆ ವೈದ್ಯರನ್ನು ಕೇಳಿ ತಿಳಿದುಕೊಳ್ಳಿ.
  • ಮಕ್ಕಳ ಆಹಾರ, ಆಟಪಾಠಗಳ ಬಗ್ಗೆ ಗಮನ ಇರಲಿ, ಐದು ನಿಮಿಷದಲ್ಲಿಯೂ ಅನಾಹುತ ಸಂಭವಿಸಬಹುದು. ಮಕ್ಕಳ ಮೇಲೆ ಗಮನ ಇರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!