Re-boiling Water | ಒಮ್ಮೆ ಬಿಸಿ ಮಾಡಿದ ನೀರನ್ನು ಮತ್ತೆ ಕುದಿಸಿ ಕುಡಿಯುತ್ತಿದ್ದೀರಾ? ಹಾಗಾದ್ರೆ ಈ ಆರೋಗ್ಯ ಸಮಸ್ಯೆ ಬರೋದು ಪಕ್ಕಾ!

ಮಳೆಗಾಲ ಬಂದೇಬಿಟ್ಟಿದೆ ಬಿಸಿ ಬಿಸಿ ಕಷಾಯ, ನೀರು, ಆಹಾರ ಸೇವಿಸಬೇಕು ಅಂತ ವೈದ್ಯರು ಸಲಹೆ ಕೊಡ್ತಾರೆ. ಹೆಚ್ಚಾಗಿ ಬಿಸಿ ನೀರನ್ನು ಕುಡಿಯೋಕೆ ಹೇಳ್ತಾರೆ. ನಾವು ಕೂಡ ನೀರನ್ನು ಪದೇ ಪದೇ ಬಿಸಿ ಮಾಡಿ ಕುಡಿತೀವಿ. ಬಿಸಿನೀರನ್ನು ಮತ್ತೆ ಮತ್ತೆ ಕುದಿಸಿ ಕುಡಿಯೋದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತ ಗೊತ್ತಾ?

Planning To Re-Boil Drinking Water? 6 Reasons Why You Shouldn't | Lifestyle News - News18

ಒಮ್ಮೆ ಬಿಸಿ ಮಾಡಿದ ನೀರನ್ನು ಮರುಬಿಸಿ ಮಾಡಿದಾಗ ಅದರಲ್ಲಿರುವ ಲವಣಗಳು ಹೆಚ್ಚು ಸಾಂದ್ರೀಕೃತವಾಗುತ್ತವೆ. ವಿಶೇಷವಾಗಿ ನೈಟ್ರೇಟ್ ಲವಣಗಳು ವಿಷಕಾರಿ ನೈಟ್ರೋಸಮೈನ್ ಆಗಿ ಬದಲಾಗಬಹುದು, ಇದು ಕ್ಯಾನ್ಸರ್, ಲ್ಯುಕೇಮಿಯಾ ಮುಂತಾದ ಮಾರಕ ಕಾಯಿಲೆಗೆ ಕಾರಣವಾಗಬಹುದು.

ಇದೇ ರೀತಿ ಕೆಲವೊಂದು ಪ್ರದೇಶದ ನೀರಿನಲ್ಲಿ ಆರ್ಸೆನಿಕ್ ಅಂಶ ಅಲ್ಪ ಪ್ರಮಾಣದಲ್ಲಿರಬಹುದು. ಮತ್ತೆ ಬಿಸಿ ಮಾಡಿದರೆ ಈ ಅಂಶ concentrate ಆಗಿ, ಕ್ಯಾನ್ಸರ್, ಬಂಜೆತನ ಮತ್ತು ಹೃದಯಾಘಾತದಂತ ಆರೋಗ್ಯ ಹಾನಿಗೆ ಕಾರಣವಾಗಬಹುದು.

West Coast awaits further tests as residents face boiling water until Monday | RNZ News

ಇನ್ನೂ, ಫ್ಲೋರೈಡ್ ಪ್ರಮಾಣ ಹೆಚ್ಚಾದರೆ ಮೂಳೆಗಳು ದುರ್ಬಲಗೊಳ್ಳುತ್ತವೆ. 8 ವರ್ಷದೊಳಗಿನ ಮಕ್ಕಳಿಗೆ ಹಲ್ಲು ಹಾನಿ ಉಂಟಾಗುವ ಅಪಾಯವಿದೆ. ಕ್ಯಾಲ್ಸಿಯಂ ಹೆಚ್ಚಾಗಿದ್ದರೆ ಕಿಡ್ನಿ ಕಲ್ಲು, ಪಿತ್ತಗಲ್ಲು ಉಂಟಾಗಬಹುದು.

ಅಂತೆಯೇ, ನೀರಿನ pH ಮಟ್ಟ ಬದಲಾಗುವುದು, ನೀರಿನ ರುಚಿಯು ಹಾಳಾಗುವುದು, ಮತ್ತು ಕರಗಿ ಅನಿಲಗಳು ಹೊರ ಹೋಗುವುದು – ಇವೆಲ್ಲವೂ ನೀರಿನ ಗುಣಮಟ್ಟ ಕೆಡಿಸಬಲ್ಲದು.

Is boiled water safe to drink?

ಹೀಗಾಗಿ, ಆರೋಗ್ಯದ ದೃಷ್ಟಿಯಿಂದ ಬಿಸಿನೀರನ್ನು ಒಮ್ಮೆ ಕುದಿಸಿದ ಮೇಲೆ ಪದೇ ಪದೇ ಬಿಸಿ ಮಾಡಿ ಕುಡಿಯುವುದನ್ನು ತಪ್ಪಿಸಿದರೆ ಉತ್ತಮ ಎಂದು ತಜ್ಞರು ಹೇಳುತ್ತಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!