ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊರ ರಾಜ್ಯಗಳಿಂದ ವಾಹನಗಳನ್ನು ತಂದು ಇಲ್ಲಿ ರಸ್ತೆ ತೆರಿಗೆ ಪಾವತಿಸದೇ, ನಿಯಮ ಉಲ್ಲಂಘಿಸುತ್ತಾ ಚಲಾಯಿಸುತ್ತಿರುವವರಿಗೆ ಸಾರಿಗೆ ಇಲಾಖೆ ಶಾಕ್ ನೀಡಿದೆ.
ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕ ಪ್ರಮುಖ ನಗರಗಳಲ್ಲಿ ನಿಯಮ ಉಲ್ಲಂಘಿಸುತ್ತಿರುವ ವಾಹನಗಳ ಪೈಕಿ ಹೊರ ರಾಜ್ಯದ ವಾಹನಗಳ ಪಾಲು ದೊಡ್ಡದಿದೆ. ಹೀಗಾಗಿ ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ಹಾಗೂ ಟ್ರಾಫಿಕ್ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.
ರಸ್ತೆ ತೆರಿಗೆ ಪಾವತಿಸದೆ, ನಿಯಮ ಉಲ್ಲಂಘಿಸಿ ಓಡಿಸುತ್ತಿರುವ ಹೊರ ರಾಜ್ಯದ ವಾಹನಗಳನ್ನು ಅಧಿಕಾರಿಗಳು ಸೀಝ್ ಮಾಡಿದ್ದಾರೆ. ಕರ್ನಾಟಕ ನಿಯಮ ಅನುಸರಿಸಿ ರಾಜ್ಯದ ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. 30 ದಿನಕ್ಕಿಂತ ಹೆಚ್ಚಿನ ಕಾಲ ಹೊರ ರಾಜ್ಯದ ವಾಹನ ಓಡಾಟ ನಡೆಸಿದರೆ ದಂಡ ಬೀಳುವುದು ಖಚಿತ.
2014ರ ಕರ್ನಾಟಕ ಮೋಟಾರು ವಾಹನ ಕಾಯ್ದೆ ಪ್ರಕಾರ ಹೊರ ರಾಜ್ಯದ ವಾಹನಗಳು ಕರ್ನಾಟಕದಲ್ಲಿ ಗರಿಷ್ಠ 30 ದಿನ ಓಡಾಟ ನಡೆಸಬಹುದು. ಅದಕ್ಕಿಂತ ಹೆಚ್ಚು ದಿನ ಕರ್ನಾಟಕದಲ್ಲಿ ಓಡಿದರೆ ಸಂಪೂರ್ಣ ರಸ್ತೆ ತೆರಿಗೆ ಪಾವತಿಸಬೇಕು.