ಮನುಷ್ಯ ಅಂದಮೇಲೆ ಕೋಪ ಬರದೇ ಇರೋಕೆ ಸಾಧ್ಯವಾ? ಎಂತದ್ದೇ ಸಾಧು ವ್ಯಕ್ತಿಯಾದ್ರು ಯಾವುದೋ ಒಂದು ಸಮಯದಲ್ಲಿ ತಾಳ್ಮೆ ಕಳೆದುಕೊಳ್ತಾರೆ. ಮನೆಯಲ್ಲಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಎಷ್ಟು ಬಾರಿ, ಎಷ್ಟು ಜನರ ಮೇಕೆ ಕೋಪ ಮಾಡಿಕೊಳ್ತೀರಿ ಯೋಚಿಸಿ. ಇದು ನಿಮ್ಮ ಮನೆಯ ಅಥವಾ ಆಫೀಸ್‌ನ ವಾತಾವರಣಕ್ಕೂ ಒಳ್ಳೆಯದಲ್ಲ. ಜೊತೆಗೆ ನಿಮ್ಮ ದೇಹಕ್ಕೂ ಒಳ್ಳೆಯದಲ್ಲ. ಕೋಪ ಬಂದು ತಪ್ಪು ಮಾಡಿದ ನಂತರ ಪಶ್ಚಾತ್ತಾಪ ಪಡ್ತೀರಲ್ಲ, ಆ ಫೀಲಿಂಗ್‌ನ್ನು ಮರೆಯಬೇಡಿ. ಅದನ್ನು ನೆನಪಿನಲ್ಲಿ ಇಟ್ಟುಕೊಂಡರೆ ಮತ್ತೆ ಕೋಪ ಬರೋದಿಲ್ಲ. ಕೋಪ ಬಂದಾಗ ಏನು ಮಾಡಬಹುದು?
ನಿಮ್ಮ ಮಾತುಗಳನ್ನು ಗಂಟಲಲ್ಲೇ ಅದುಮಿ ಇಟ್ಟುಕೊಳ್ಳಿ, ಅದು ಹೊರಗೆ ಬಂದರೆ ಪರಿಣಾಮ ಹೇಗಿರಬಹುದು ಎಂದು ಯೋಚಿಸಿ, ಡ್ಯಾಮೇಜ್ ಆದ ನಂತರ ಎಷ್ಟೇ ತ್ಯಾಪೆ ಹಚ್ಚಿದರೂ ಸರಿ ಹೋಗೋದಿಲ್ಲ.
ಹೆಚ್ಚು ಕೋಪಗೊಂಡಾಗ ತಲೆ ಬಿಸಿಯಾಗುತ್ತದೆ. ಯಾವುದೇ ಸಂತೋಷದ ಸಮಯವನ್ನು ಕಳೆಯಲು ಕಷ್ಟವಾಗುತ್ತದೆ. ಹೀಗೆ ಕೋಪ ಮಾಡಿಕೊಳ್ಳುವ ಪರ್ಯಾಯವಾಗಿ ಮನಸ್ಸಿನ ಮೇಲೆ ಕೇಂದ್ರೀಕರಿಸಿ ಶಾಂತ ಮನಸ್ಸಿನಿಂದ ಕುಳಿತುಕೊಳ್ಳಿ. 10 ರಿಂದ 0 ತನಕ ಮತ್ತು 0 ಯಿಂದ 10 ವರೆಗೆ ಎಣಿಸಲು ಪ್ರಾರಂಭಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಹೃದಯ ಬಡಿತ ನಿಧಾನವಾಗುತ್ತದೆ ಮತ್ತು ನಿಮ್ಮ ಕೋಪವು ಕಡಿಮೆಯಾಗುತ್ತದೆ.
ನೀವು ತುಂಬಾ ಕೋಪ ಹೊಂದಿದ್ದಾಗ ನೀವು ಮಾಡಬೇಕಾಗಿರುವುದು ಇಷ್ಟೇ ಸ್ಥಳದಿಂದ ಹೊರ ನಡೆಯಿರಿ. ಮನಸ್ಸಿಗೆ ಪ್ರಶಾಂತತೆಯನ್ನು ಉಂಟು ಮಾಡುವ ಸ್ಥಳಕ್ಕೆ ನಡೆಯಿರಿ. ಉದಾಹರಣೆಗೆ ನಿಮ್ಮ ಸ್ನೇಹಿತರಿರುವ ಸ್ಥಳ ಅಥವಾ ಉದ್ಯಾನವನ. ಇವು ನಿಮ್ಮ ಕೋಪವನ್ನು ಹಠಾತ್ ಆಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಡಿಗೆ ಒಂದು ರೀತಿಯ ವ್ಯಾಯಾಮವಾಗಿದ್ದು, ನಿಮ್ಮ ನರಗಳನ್ನು ಶಾಂತಗೊಳಿಸಲು ಮತ್ತು ಕೋಪವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ. ಇದು ನಿಮ್ಮ ಮನಸ್ಸು ಮತ್ತು ದೇಹಕ್ಕೆ ಒಳ್ಳೆಯದು.
ಕೋಪಾದ್ರಿಕ್ತ ಸಮಯದಲ್ಲಿ ದೇಹವು ಅನೇಕ ಬದಲಾವಣೆಯನ್ನು ಕಾಣುತ್ತದೆ. ಈ ಸಮಯದಲ್ಲಿ ಸ್ನಾಯುವಿನ ವಿಶ್ರಾಂತಿಯು ಬಹಳ ಮುಖ್ಯವಾಗಿದೆ. ನಿಮ್ಮ ದೇಹದಲ್ಲಿನ ವಿವಿಧ ಸ್ನಾಯು ಗುಂಪುಗಳನ್ನು ಒಂದೊಂದಾಗಿ ಉದ್ವಿಗ್ನಗೊಳಿಸಲು ಮತ್ತು ನಿಧಾನವಾಗಿಸಲು ಸಮಾಧಾನವಾಗಿರಿ. ಈ ಸಮಯದಲ್ಲಿ ಉಸಿರನ್ನು ಜೋರಾಗಿ ತೆಗೆದುಕೊಳ್ಳುವುದು, ಬಿಡುವುದು ಮಾಡಿ. ನಿಮ್ಮ ದೇವರ ಸ್ಮರಣೆ ಇಷ್ಟವಿದ್ದರೆ ಒಂದರೆಡು ಶ್ಲೋಕಗಳನ್ನು ಜೋರಾಗಿ ಹೇಳಿ. ಈ ಚಟುವಟಿಕೆಯು ನಿಮ್ಮ ಕೋಪವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.