SHOCKING VIDEO| ಎಟಿಎಂಗೆ ಹೋಗುವ ಮುನ್ನ ಇರಲಿ ಎಚ್ಚರ!

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೀವು ಎಟಿಎಂಗೆ ಹೋಗುವವರಾದರೆ, ಜಾಗರೂಕರಾಗಿರಿ. ಯಾವಾಗ ಯಾವ ಆಪತ್ತು ಬರುತ್ತದೆಯೋ ತಿಳಿಯದ ಪರಿಸ್ಥಿತಿ. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಹಣ ಹಾಕಲು ಎಟಿಎಂಗೆ ಹೋಗಿದ್ದ. ಹಣ ಹಾಕುವ ವೇಳೆ ಅಪರಿಚಿತ ವ್ಯಕ್ತಿಗಳು ಎಟಿಎಂಗೆ ನುಗ್ಗಿ ಹಣ ದೋಚಿದ್ದಾರೆ. ಸಿಸಿ ದೃಶ್ಯಾವಳಿ ಆಧರಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಜುಲೈ 3ರಂದು ಎಟಿಎಂಗೆ ಹಣ ಹಾಕಲು ಬಂದಿದ್ದ ಯುವಕನ ಮೇಲೆ ಮುಸುಕುಧಾರಿಗಳು ಬಂದು ಹಲ್ಲೆ ನಡೆಸಿ ಹಣದ ಬ್ಯಾಗ್‌ ದೋಚಿದ್ದಾರೆ. ಸಂತ್ರಸ್ತ ಘಟನೆಯನ್ನು ಪೊಲೀಸರಿಗೆ ವಿವರಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹೈದರಾಬಾದ್ ಕಮಿಷನರ್ ಟಾಸ್ಕ್ ಫೋರ್ಸ್ ಮತ್ತು ದೋಮಲ್‌ಗುಡಾ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಗುರುತಿಸಿದ್ದಾರೆ. ಜುಲೈ 14 ರಂದು ಅವರನ್ನು ಬಂಧಿಸಲಾಯಿತು. ಅವರಿಂದ ದರೋಡೆಗೆ ಬಳಸಿದ್ದ ವಾಹನ, ಮೋಟಾರ್ ಬೈಕ್ ಸೇರಿದಂತೆ 3.25 ಲಕ್ಷ ನಗದು ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಕೇರಳ ಮೂಲದ ಥಾನ್ಸಿಸ್ ಅಲಿ, ಮೊಹಮ್ಮದ್ ಸಹದ್, ತನ್ಸೀಹ್ ಬಾರಿಕ್ಕಲ್ ಮತ್ತು ಅಬ್ದುಲ್ ಮುಹೀಸ್ ಎಂದು ಪೊಲೀಸರು ಗುರುತಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ರಾತ್ರಿ ವೇಳೆ ಎಟಿಎಂಗೆ ಹೋಗಬೇಕಾದರೆ ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದು ಪೊಲೀಸರು ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!