GOLD RATE | ಗೋಲ್ಡ್‌ ಖರೀದಿಗೆ ಹೋಗ್ತಿದ್ದೀರಾ? ಬೆಲೆ ಸ್ವಲ್ಪ ಜಾಸ್ತಿ ಆಗಿದೆ ನೋಡ್ಕೊಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಿನ್ನದ ಬೆಲೆಯ ಸತತ ಏರಿಕೆ ಇವತ್ತು ಬುಧವಾರವೂ ಮುಂದುವರಿದಿದೆ. ಇಂದು ಗ್ರಾಮ್​ಗೆ 80 ರೂನಷ್ಟು ಬೆಲೆ ಏರಿಕೆ ಆಗಿದೆ.

ದೆಹಲಿ ಮೊದಲಾದ ಕೆಲವೆಡೆ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,300 ರೂ ಗಡಿ ಮುಟ್ಟಿದೆ. ಬೆಂಗಳೂರು ಇತ್ಯಾದಿ ಕಡೆ 7,285 ರೂಗೆ ಏರಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಆಗಿದೆ. ನಿನ್ನೆ ಗ್ರಾಮ್​ಗೆ 4-5 ರೂನಷ್ಟು ಭಾರೀ ಏರಿಕೆ ಕಂಡಿದ್ದ ಬೆಳ್ಳಿ ಬೆಲೆ ಇವತ್ತು ಒಂದು ರೂ ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 95.50 ರೂ ಇದ್ದರೆ ಚೆನ್ನೈ ಮೊದಲಾದ ಕಡೆ 103 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 72,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 79,470 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,550 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 72,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,550 ರುಪಾಯಿಯಲ್ಲಿ ಇದೆ.

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,850 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,470 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,610 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 955 ರೂ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!