ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಿಗಿರಿಧಾಮಕ್ಕೆ ಬೆಳ್ಳಂಬೆಳಗ್ಗೆ ಜನ ಹೋಗುತ್ತಾರೆ. ಗಡಗಡ ನಡುಗುವ ಚಳಿಯಲ್ಲಿಯೂ ವ್ಯೂ ಹಾಗೂ ಸನ್ರೈಸ್ ನೋಡೋದಕ್ಕೆ ಜನ ಹೋಗುತ್ತಾರೆ. ವೀಕೆಂಡ್ ಅತಿಯಾದ ರಶ್ ಇರುವ ಕಾರಣ ಜನ ವೀಕ್ಡೇಗಳ ಮೊರೆ ಹೋಗುತ್ತಿದ್ದಾರೆ. ಆದರೆ ಪ್ರವಾಸಿಗರು ಸ್ವಲ್ಪ ಯಾಮಾರಿದರೂ ಪ್ರಾಣ ಹೋಗುವ ಸಾಧ್ಯತೆ ಇದೆ.
ನಂದಿಗಿರಿಧಾಮದ ಬಳಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ನಂದಿ ಹಿಲ್ಸ್ಗೆ ಬರುವ ಪ್ರವಾಸಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗಿರಿಧಾಮದ ಕಣಿವೆ ಬಸವಣ್ಣ ದೇವಸ್ಥಾನದ ಬಳಿ ಭಾನುವಾರ ರಾತ್ರಿ ಚಿರತೆ ಕಾಣಿಸಿದೆ. ಇತ್ತೀಚಿಗೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಚಿರತೆ ಸಂತತಿ ಹೆಚ್ಚಳವಾಗಿದ್ದು, ಪ್ರತಿದಿನ ಒಂದಿಲ್ಲೊಂದು ಕಡೆ ಕಾಣಿಸುತ್ತಿವೆ. ಅಲ್ಲಿಗೆ ಪ್ರವಾಸ ಹೋಗುವ ಮುನ್ನ ಆಲೋಚಿಸಿ.

