February 21, 2026
Saturday, February 21, 2026
spot_img

HEALTH | ರಾತ್ರಿ ಚೆನ್ನಾಗಿ ನಿದ್ದೆ ಬರ್ತಿಲ್ವಾ? ಈ ತಪ್ಪುಗಳನ್ನು ನಿಲ್ಲಿಸಿ

ರಾತ್ರಿ ಚೆನ್ನಾಗಿ ನಿದ್ದೆ ಬರ್ತಾ ಇಲ್ವಾ? ಬೆಳಗ್ಗೆ ಅಥವಾ ಸಂಜೆಯ ನಂತರ ನೀವು ಮಾಡುವ ಈ ಕೆಲಸಗಳು ನಿಮ್ಮ ನಿದ್ದೆಗೆ ಭಂಗ ತರುತ್ತದೆ. ಯಾವ ತಪ್ಪು? ಇಲ್ಲಿದೆ ಡೀಟೇಲ್ಸ್‌ ..

ಕೆಲವರಿಗೆ ಗಂಟೆಗೊಮ್ಮೆ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಇದು ಆರೋಗ್ಯ ಮತ್ತು ನಿದ್ದೆ ಎರಡಕ್ಕೂ ಹಾನಿಯುಂಟು ಮಾಡುತ್ತದೆ. ಅದರಲ್ಲೂ ಮಧ್ಯಾಹ್ನ 12 ಗಂಟೆಯ ನಂತರ ಕೆಫೀನ್ ಅಂಶವಿರುವ ಪದಾರ್ಥ ಸೇವಿಸಿದರೆ ನಿದ್ರೆಗೆ ಅಡ್ಡಿಯಾಗಬಹುದು. ಆದ್ದರಿಂದ ಮಧ್ಯಾಹ್ನದ ನಂತರ ಚಹಾ, ಕಾಫಿಯನ್ನು ಅವೈಡ್‌ ಮಾಡುವುದು ಒಳ್ಳೆಯದು.

ರಾತ್ರಿ ಹೊತ್ತು ನಮ್ಮ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ, ಆದ್ದರಿಂದ ರಾತ್ರಿಯ ಊಟಕ್ಕೆ ಲಘುವಾಗಿ ಏನನ್ನಾದರೂ ಸೇವಿಸುವುದು ಉತ್ತಮ. ಅಲ್ಲದೆ ರಾತ್ರಿ ಹೊಟ್ಟೆ ಬಿರಿಯುವಂತೆ ಊಟ ಮಾಡುವುದು, ಮಸಾಲೆ ಭರಿತ ಆಹಾರ ಸೇವನೆ, ಎಣ್ಣೆಯಲ್ಲಿ ಕರಿದ ಆಹಾರ, ಮಾಂಸದ ಸೇವನೆಯಿಂದ ರಾತ್ರಿ ನಿದ್ದೆ ಬರದೇ ಇರಬಹುದು. ಆದ್ದರಿಂದ ರಾತ್ರಿ ಊಟ ಆದಷ್ಟು ಲಘುವಾಗಿರಬೇಕು. ಅದು 8 ಗಂಟೆ ಅಥವಾ 9 ಗಂಟೆಯೊಳಗೆ ಊಟ ಮಾಡಿದರೆ ಇನ್ನೂ ಒಳ್ಳೆಯದು.

ಮೊಬೈಲ್‌, ಕಂಪ್ಯೂಟರ್‌ಗಳ ಬಳಕೆಯಿಂದ ಅವುಗಳು ಸೂಸುವ ಹಾನಿಕಾರಕ ಕಿರಣಗಳು ಕಣ್ಣಿಗೆ ಹಾನಿಯುಂಟು ಮಾಡುತ್ತವೆ. ಇದರಿಂದ ನಿದ್ದೆಗೆ ಭಂಗವಾಗುತ್ತದೆ. ಹೀಗಾಗಿ ಮಲಗುವ ಸಮಯಕ್ಕೆ 1 ಗಂಟೆ ಮೊದಲು ಗ್ಯಾಜೆಟ್‌ಗಳನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ. ಇಡೀ ದಿನ ಅದನ್ನೇ ನೋಡಿ ಕೆಲಸ ಮಾಡಿ ರಾತ್ರಿಯೂ ಅದೇ ಗ್ಯಾಜೇಟ್‌ಗಳ ಬಳಕೆ ಮಾಡುವುದು ಕಣ್ಣಿಗೆ ವಿಶ್ರಾಂತಿಯೇ ಇಲ್ಲದಂತೆ ಮಾಡುತ್ತದೆ.

ಬೆಳಿಗ್ಗೆ ಸ್ವಲ್ಪ ಸೂರ್ಯನ ಬೆಳಕನ್ನು ಪಡೆಯುವುದು ಅಥವಾ ಸಂಜೆ ನೈಸರ್ಗಿಕ ಬೆಳಕಿನಲ್ಲಿ ಓಡಾಡುವುದರಿಂದ ಮಲಗುವ ಸಮಯದಲ್ಲಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಇದು ದೇಹದ ದೈನಂದಿನ ಸಿರ್ಕಾಡಿಯನ್ ಲಯವನ್ನು ಹೊಂದಿಸಲು ಸಹಾಯ ಮಾಡುವ ಮೂಲಕ ನಿದ್ದೆ ಬರುವಂತೆ ಮಾಡುತ್ತದೆ.

ಬೆಳಗಿನ ಸೂರ್ಯ ಕಿರಣಗಳಿಗೆ ದೇಹವನ್ನು ಒಡ್ಡಿಕೊಳ್ಳುವುದರಿಂದ ದೇಹಕ್ಕೆ ಅತ್ಯಗತ್ಯವಾದ ವಿಟಮಿನ್‌ ಡಿ ಸಿಗುತ್ತದೆ. ಇದು ಮೂಳೆಗಳನ್ನು ಬಲಪಡಿಸಲು, ರೋಗ ನೀರೋಧಕ ಶಕ್ತಿಯನ್ನು ಉತ್ತಮವಾಗಿಸಲು ಸಹಾಯ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !