ಹೇಗೆ ಮಾಡೋದು?
ಮೊದಲು ಮಿಕ್ಸಿಗೆ ಪುದೀನ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ನಂತರ ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಪಲಾವ್ ಎಲೆ, ಚಕ್ಕೆ, ಲವಂಗ ಹಾಕಿ ಬಾಡಿಸಿ
ನಂತರ ಎರಡು ಹಸಿಮೆಣಸು, ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ
ನಂತರ ಉಪ್ಪು, ಗರಂ ಮಸಾಲಾ, ಆಲೂಗಡ್ಡೆ, ಬಟಾಣಿ ಹಾಕಿ ಮಿಕ್ಸ್ ಮಾಡಿ
ಇದು ಸ್ವಲ್ಪ ಬೆಂದ ನಂತರ ಇದಕ್ಕೆ ಮಿಕ್ಸಿಯ ಮಸಾಲಾ ಹಾಕಿ
ಎಣ್ಣೆ ಬಿಟ್ಟ ನಂತರ ಅಕ್ಕಿ ಹಾಗೂ ನೀರು ಹಾಕಿ, ಕಡೆಗೆ ಒಂದು ಸ್ಪೂನ್ ತುಪ್ಪ ಹಾಕಿ ಎರಡು ವಿಶಲ್ ಕೂಗಿಸಿದ್ರೆ ಪುದೀನಾ ರೈಸ್ ಬಾತ್ ರೆಡಿ
Rice series 67 | ರಜೆ ಅಂತ ಮನೆಯಲ್ಲೇ ಇದ್ದೀರಾ? ಸೂಪರ್ ಡೆಲಿಶಿಯಸ್ ಪುದೀನಾ ರೈಸ್ ಬಾತ್ ಟ್ರೈ ಮಾಡಿ

