ಸಣ್ಣ ಪುಟ್ಟ ಶೀತ, ಜ್ವರ, ತಲೆನೋವು ಮೊದಲಾದ ಸಾಮಾನ್ಯ ತೊಂದರೆಗಳಿಗೂ ತಕ್ಷಣವೇ ಪ್ಯಾರಾಸಿಟಮಾಲ್, ಐಬುಪ್ರೋಫೆನ್ ಅಥವಾ ಎಂಟಿಬಯೋಟಿಕ್‌ಗಳನ್ನೇ ತೆಗೆದುಕೊಳ್ಳುವುದು ಈಗ ಸಾಮಾನ್ಯವಾಗಿದೆ. ಆದರೆ, ಇಂತಹ ಟ್ಯಾಬ್ಲೆಟ್ ಗಳ ನಿರಂತರ ಸೇವನೆ ದೀರ್ಘಾವಧಿಯಲ್ಲಿ ಕಿಡ್ನಿಗೆ ತೀವ್ರ ಹಾನಿ ಉಂಟುಮಾಡಬಹುದೆಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ನೀರೋಗಿ ವ್ಯಕ್ತಿಯೊಬ್ಬ ದಿನಕ್ಕೆ 3, 4 ಪ್ಯಾರಾಸಿಟಮಾಲ್ ಮಾತ್ರೆಗಳನ್ನು ಕ್ರಮಬದ್ಧವಾಗಿ ಸೇವಿಸುತ್ತಿದ್ದರೆ, ಅದರಿಂದಾಗಿ ‘ಡ್ರಗ್ ಇಂಡ್ಯೂಸ್‌ಡ್ ನಿಫ್ರೊಪಥಿ’ ಎಂಬ ಸ್ಥಿತಿ ಉಂಟಾಗಬಹುದು. ಇದರ ಅರ್ಥ, ಔಷಧಿಯು ಕಿಡ್ನಿ ಕೋಶಗಳನ್ನು ಹಾನಿಗೊಳಿಸುತ್ತೆ ಎಂದು ವೈದ್ಯರು ಎಚ್ಚರಿಸುತ್ತಾರೆ.
ಶೀತ ಅಥವಾ ಜ್ವರ ಬಂದ ತಕ್ಷಣವೇ ಟ್ಯಾಬ್ಲೆಟ್ ತಗೊಳ್ಳುವುದು ನಮ್ಮ ಇಮ್ಯೂನ್ ವ್ಯವಸ್ಥೆಗೆ ತುಂಬಲಾರದ ನಷ್ಟ ಉಂಟುಮಾಡುತ್ತದೆ. immunity naturally work ಆಗೋ ಅವಕಾಶವನ್ನೇ ಔಷಧಿ ದಿಂದ ನಾವು ಕಡಿಮೆ ಮಾಡ್ತಾ ಇದ್ದೇವೆ. ಹಾಗಾಗಿ ಸಾಮಾನ್ಯ ಶೀತಕ್ಕೆ ಮನೆ ಮದ್ದುಗಳ ಉಪಯೋಗವನ್ನು ಮೊದಲಿಗೆ ಪ್ರಯತ್ನಿಸಬೇಕು.
ಹೆಚ್ಚು ಮಾತ್ರೆ ಸೇವನೆಯಿಂದ ಕೇವಲ ಕಿಡ್ನಿಯಲ್ಲ, ಲಿವರ್ ಕೂಡ ಹಾನಿಗೊಳಗಾಗುವ ಅಪಾಯವಿದೆ. ವಿಶೇಷವಾಗಿ ವಾರಕ್ಕೆ ಮೂರೇ ಹೆಚ್ಚು ಬಾರಿ ಪೇನ್ ಕಿಲ್ಲರ್ ಸೇವನೆ ಮಾಡುವವರಲ್ಲಿ ಈ ಅಪಾಯ ಗಂಭೀರವಾಗಿದೆ.
ಆದರೆ, ತೀವ್ರ ಜ್ವರ, ಕಾಯಿಲೆ ನಿರಂತರವಾಗಿ ಮುಂದುವರಿದರೆ, ಡಾಕ್ಟರ್ ಸಲಹೆ ಪಡೆಯುವುದು ಅತ್ಯಗತ್ಯ. ಸ್ವತಃ ತಾವೇ ಡೈಗ್ನೋಸ್ ಮಾಡಿಕೊಂಡು ಔಷಧಿ ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ವೈದ್ಯರು ಪುನಃ ಪುನಃ ಎಚ್ಚರಿಸುತ್ತಿದ್ದಾರೆ.
ಹೀಗಾಗಿ, ಯಾವುದೇ ಸಣ್ಣ ರೋಗಕ್ಕೂ ತಕ್ಷಣ ಟ್ಯಾಬ್ಲೆಟ್ ಸೇವನೆಯ temptationಗೆ ಒಳಗಾಗದೇ, ಪ್ರಾಕೃತಿಕವಾಗಿ ಇಮ್ಮ್ಯೂನ್ ವ್ಯವಸ್ಥೆ ಬೆಳೆಸುವುದು ಆರೋಗ್ಯಕರ ಆಯ್ಕೆಯಾಗಿದೆ.