ಮಳೆಗಾಲದ ಚಳಿ-ತೇವಾಂಶವು ನಾವು ಎಸಿ ಬಳಸುವ ಅವಶ್ಯಕತೆಯೇ ಇಲ್ಲವೆಂಬಂತಿದೆ. ಆದರೆ ಕೆಲವರಿಗೆ ಎಸಿಯಲ್ಲಿ ಸಮಯ ಕಳೆಯುವುದು ಅಭ್ಯಾಸವಾಗಿದೆ. ಮನೆ ಅಥವಾ ಕಚೇರಿಯಲ್ಲಿ, ಯಾವುದೇ ಋತುವಿನಾಗಲೀ, ಎಸಿ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಕೆಲ ಮೂಲಭೂತ ಮುಂಜಾಗ್ರತೆಗಳನ್ನು ತೆಗೆದುಕೊಳ್ಳುವುದು ಬಹುಮುಖ್ಯ.
ಮೊದಲು ತಾಪಮಾನ ನಿಯಂತ್ರಣದ ಬಗ್ಗೆ ಗಮನವಿರಲಿ. ಮಳೆಗಾಲದಲ್ಲಿ ಹೊರಗಿನ ವಾತಾವರಣ ಈಗಾಗಲೇ ತಂಪಾಗಿರುತ್ತದೆ, ಆದ್ದರಿಂದ ಎಸಿಯನ್ನು 24°c ರಿಂದ 26°c ನಡುವೆ ಇಡುವುದು ಸೂಕ್ತ. ಇದಕ್ಕಿಂತ ಕಡಿಮೆ ಮಾಡಿದರೆ ಅದು ಆರೋಗ್ಯಕ್ಕೂ ಮತ್ತು ವಿದ್ಯುತ್ ಬಿಲ್ಲಿಗೂ ಹಾನಿಕಾರಕ.
ಮಳೆಗಾಲದಲ್ಲಿ ವೋಲ್ಟೇಜ್ ಏರಿಳಿತ ಸಾಮಾನ್ಯ. ಈ ಕಾರಣಕ್ಕೆ ಉತ್ತಮ ಗುಣಮಟ್ಟದ ಸ್ಟೆಬಿಲೈಜರ್ ಬಳಕೆ ಅಗತ್ಯವಿದೆ. ಆಗಾಗ್ಗೆ ಗುಡುಗು ಬರುವ ಪರಿಸ್ಥಿತಿಯಲ್ಲಿ ಎಸಿಯನ್ನು ಪೂರ್ತಿ ಆಫ್ ಮಾಡುವುದೂ ಸುರಕ್ಷಿತ ಕ್ರಮ.
ಮಳೆಗಾಲದಲ್ಲಿ ಗಾಳಿಯ ತೇವಾಂಶ ಹೆಚ್ಚಿರುತ್ತದೆ. ಕೋಣೆಯ ಗಾಳಿಯಿಂದ ತೇವಾಂಶವನ್ನು ಹೀರಿಕೊಳ್ಳುವುದು ಮತ್ತು ತಂಪಾಗಿರಿಸುವುತ್ತದೆ. ಇದರಿಂದಾಗಿ ‘ಡ್ರೈ ಮೋಡ್’ ಆಯ್ಕೆಯನ್ನು ಬಳಸುವುದು ಉತ್ತಮ. ಇದರಿಂದ ಕೋಣೆ ತಂಪಾಗಿರುತ್ತದೆ ಮತ್ತು ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ.
ಎಸಿಯ ಫಿಲ್ಟರ್ ನಿಗದಿತ ಅವಧಿಗೆ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಕೊಳಕು ಫಿಲ್ಟರ್ ಗಾಳಿಯ ಹರಿವಿಗೆ ಅಡೆತಡೆ ಉಂಟುಮಾಡುತ್ತದೆ. ಇದು ಎಸಿಯ ಮೇಲೆ ಹೆಚ್ಚು ಒತ್ತಡ ಉಂಟುಮಾಡಿ ವಿದ್ಯುತ್ ಖರ್ಚನ್ನು ಹೆಚ್ಚಿಸುತ್ತದೆ. ಇದಲ್ಲದೆ, ಎಸಿಗೆ ಕಾಲಕಾಲಕ್ಕೆ ಸರ್ವಿಸ್ ಮಾಡಿಸಿಕೊಳ್ಳುವುದು ಅದರ ದೀರ್ಘಾಯುಷ್ಯಕ್ಕೆ ಸಹಾಯಮಾಡುತ್ತದೆ.