Silk Sarees | ರೇಷ್ಮೆ ಸೀರೆ ತೊಳೆದರೆ ಬಣ್ಣ ಮಾಸಿಹೋಗುತ್ತೆ ಅನ್ನೋ ಭಯಾನಾ? ಈ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿ!

ರೇಷ್ಮೆ ಸೀರೆ ಮಹಿಳೆಯರ ಮನಸಲ್ಲಿ ಟಾಪ್ ಸ್ಥಾನದಲ್ಲಿದೆ. ಮದುವೆ, ಹಬ್ಬ, ವಿಶೇಷ ಕಾರ್ಯಕ್ರಮ ಯಾವದ್ದೇ ಆಗಲಿ, ರೇಷ್ಮೆ ಸೀರೆ ಇಲ್ಲದೆ ಮುಗಿಯೋದೇ ಇಲ್ಲ. ಆದರೆ ಇಂತಹ ನಾಜೂಕು ಬಟ್ಟೆಗಳನ್ನು ಸರಿಯಾದ ತೊಳೆಯುವ ಹಾಗೂ ಸಂಗ್ರಹಿಸುವ ವಿಧಾನಗಳನ್ನು ಅನುಸರಿಸದಿದ್ದರೆ ಸೀರೆಯ ಬಣ್ಣ, ಹೊಳಪು, ಮತ್ತು ಆಕರ್ಷಕತೆ ಶೀಘ್ರದಲ್ಲೇ ಕಳೆದುಹೋಗಬಹುದು. ಹಾಗಾಗಿ ಇಲ್ಲಿದೆ ರೇಷ್ಮೆ ಸೀರೆಗಳನ್ನು ಸುರಕ್ಷಿತವಾಗಿ ವಾಷ್ ಮಾಡೋ 5 ಉಪಯುಕ್ತ ಸಲಹೆಗಳು:

ಸೀರೆಯ ಲೇಬಲ್ ಪರಿಶೀಲನೆ ಮಾಡಿಕೊಳ್ಳಿ
ಸೀರೆ ಖರೀದಿ ಮಾಡಿದಾಗ ಅದರಲ್ಲಿ ನೀಡಲಾದ ‘ವಾಷ್ ಇನ್‌ಸ್ಟ್ರಕ್ಷನ್’/ಲೇಬಲ್‌ ನೋಡಿ ತೊಳೆಯುವ ವಿಧಾನ ತೀರ್ಮಾನಿಸಿ. ಕೆಲವೊಂದು ರೇಷ್ಮೆ ಸೀರೆಗಳು ‘ಡ್ರೈ ಕ್ಲೀನ್ ಓನ್‌ಲಿ’ ಆಗಿರುತ್ತವೆ. ಸಾಬೂನಿನಿಂದ ತೊಳೆಯುವುದು ಕೆಲವು ಬಟ್ಟೆಗಳ ಹೊಳಪನ್ನು ನಶಿಸುಮಾಡಬಹುದು.

Panjavarnam | Off White And Red Kanchipuram Silk Saree Handwoven Pure Silk Pure Zari For Wedding Wear NYC 454

ತಣ್ಣೀರು ಬಳಸಿ ತೊಳೆಯಿರಿ
ಬಿಸಿನೀರಿನಿಂದ ರೇಷ್ಮೆ ಸೀರೆ ತೊಳೆಯುವುದು ಅತಿ ದೊಡ್ಡ ತಪ್ಪು. ಬಣ್ಣ ಮಸುಕಾಗುವುದು, ಸೀರೆಯ ನಯವಾದ ತಂತುಗಳು ತೇವಕ್ಕೆ ಹಾಳಾಗಬಹುದು. ತಣ್ಣೀರಿನಲ್ಲಿ ಸೀರೆ ನೆನೆಸಿದ ನಂತರ ನಿಧಾನವಾಗಿ ಕೈಯಿಂದ ತೊಳೆಯಬೇಕು.

Deep Magenta Body With Green Pallu Handloom Silk Cotton Saree

ವಿನೇಗರ್ ಬಳಸಿ ಮೃದುವಾಗಿ ಶುದ್ಧಗೊಳಿಸಿ
ಒಂದು ಬಕೆಟ್ ತಣ್ಣೀರಿಗೆ 2 ಚಮಚ ವೈನ್ ವಿನೇಗರ್ ಸೇರಿಸಿ. ಈ ದ್ರಾವಣದಲ್ಲಿ ಸೀರೆ 10 ನಿಮಿಷಗಳ ಕಾಲ ಇಡಿ. ಇದರಿಂದ ಸೀರೆ ಮೇಲಿನ ತೈಲದ ಕಲೆಗಳು ಅಥವಾ ದುರ್ಗಂಧ ದೂರವಾಗುತ್ತದೆ. ನಂತರ ಶುದ್ಧ ನೀರಿನಲ್ಲಿ ತೊಳೆಯಿರಿ.

Closeup view of stacked saris or sarees in display of retail shop, for use as indian textiles background. Closeup view of stacked saris or sarees in display of retail shop, for use as indian textiles background. silk saree stock pictures, royalty-free photos & images

ಸೂರ್ಯನ ಬೆಳಕಿಗೆ ಬೇಡ – ನೆರಳಲ್ಲಿ ಒಣಗಿಸಿ
ಸೀರೆ ತೊಳೆದ ನಂತರ ಗಟ್ಟಿಯಾಗಿ ಹಿಂಡಬೇಡಿ. ಗಾಳಿಯಿರುವ ನೆರಳಿನಲ್ಲಿ ಒಣಗಿಸಬೇಕು. ನೇರ ಬಿಸಿಲು ಬಣ್ಣವನ್ನು ಹಾಳುಮಾಡುತ್ತದೆ.

Hand Weaving Silk and Handloom Sarees, saree with golden details, woman wear on festival, ceremony and weddings, expensive sarees are famous for their gold zari, brocade. Incredible India. Hand Weaving Silk and Handloom Sarees, saree with golden details, woman wear on festival, ceremony and weddings, expensive sarees are famous for their gold zari, brocade. Incredible India. silk saree stock pictures, royalty-free photos & images

ಹತ್ತಿ ಬಟ್ಟೆಯಲ್ಲಿ ಸುತ್ತಿ ಸಂಗ್ರಹಿಸಿ
ಸೀರೆ ನೇರವಾಗಿ ಇತರ ಉಡುಪುಗಳೊಂದಿಗೆ ಇಡಬಾರದು. ಹತ್ತಿ ಬಟ್ಟೆಯಲ್ಲಿ ಸುತ್ತಿ, ಮಡಚಿ ಇಡಬೇಕು. ಈ ವಿಧಾನವು ರೇಷ್ಮೆಯ ಮೇಲೆ ಸುಕ್ಕು ಅಥವಾ ಕೀಟಗಳ ಹಾನಿಯಿಂದ ರಕ್ಷಣೆ ನೀಡುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!