ಇಂದು ಪೋಷಕರ ಮುಂದಿರುವ ದೊಡ್ಡ ಸವಾಲು ಅಂದ್ರೆ ಅದು ತಮ್ಮ ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸೋದು ಹೇಗೆ ಅಂತ. ಮಕ್ಕಳು ಪಾಠ ಕೇಳೋವಾಗ ಬೇಗನೆ ಮನಸ್ಸು ಬದಲಾಗುವುದು, ಚಿಂತನೆಯಲ್ಲಿ ಚಂಚಲತೆ ಕಾಣುವುದು ಎಂದರೆ, ಪೋಷಕರು ಎಚ್ಚರಿಕೆ ವಹಿಸಬೇಕಾದ ಸಮಯ ಇದು. ತಂತ್ರಜ್ಞಾನ, ಹೆಚ್ಚು ಬದಲಾವಣೆಗಳಿರುವ ದಿನಚರಿ ಮತ್ತು ಹೊರಗಿನ ವ್ಯಾಕುಲತೆಯಿಂದ ಮಕ್ಕಳ ಒತ್ತಡ ಹೆಚ್ಚಾಗುತ್ತಿದೆ. ಇದು ಸರಿಯಾಗಿ concentration ಮಾಡೋಕೆ ಸಾಧ್ಯವಾಗದೆ ಇರೋದಕ್ಕೆ ಕಾರಣ ಅಂತಾನೆ ಹೇಳ್ಬಹುದು. ಆದರೆ ಸರಿಯಾದ ಮಾರ್ಗದರ್ಶನದಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಸ್ಥಿರ ದಿನಚರಿ ರೂಪಿಸಿ
ಮಕ್ಕಳ ದಿನಚರಿ ನಿರ್ದಿಷ್ಟವಾಗಿರಲಿ – ಒಂದೇ ಸಮಯಕ್ಕೆ ಮಲಗುವ, ಏಳುವ ಅಭ್ಯಾಸ, ಓದುವ ಮತ್ತು ಆಟವಾಡುವ ಸಮಯ. ನಿಯಮಿತ ಚಟುವಟಿಕೆಗಳು ಮಕ್ಕಳ ಮನಸ್ಸಿನಲ್ಲಿ ಸ್ಮರಣಶಕ್ತಿಯ ಜೊತೆಗೆ ಒತ್ತಡ ಕಡಿಮೆ ಮಾಡುವ ಸಾಮರ್ಥ್ಯವನ್ನೂ ನೀಡುತ್ತವೆ.
ಅತಿಯಾದ ತಂತ್ರಜ್ಞಾನ ಬಳಕೆ ನಿಯಂತ್ರಿಸಿ
ಮೊಬೈಲ್, ಟ್ಯಾಬ್ ಅಥವಾ ಟಿವಿ ಹೆಚ್ಚು ಸಮಯ ಬಳಸಿದರೆ ಮನಸ್ಸು ಸುಲಭವಾಗಿ ಗೊಂದಲಕ್ಕೆ ಒಳಗಾಗುತ್ತದೆ. ದಿನದ ಒಂದು ನಿರ್ದಿಷ್ಟ ಸಮಯದವರೆಗೆ ಮಾತ್ರ ಈ ಸಾಧನಗಳನ್ನು ಬಳಸಲು ಅವಕಾಶ ನೀಡಿ.
ಸುಲಭ ಗುರಿಗಳನ್ನು ನಿಗದಿಪಡಿಸಿ
ಮಕ್ಕಳಿಗೆ ದೊಡ್ಡ ಗುರಿಯನ್ನು ನೀಡುವ ಬದಲು, ಸುಲಭವಾದ, ಸಾಧಿಸಬಹುದಾದ ಸಣ್ಣ ಸಣ್ಣ ಗುರಿಗಳನ್ನು ನೀಡುವುದರಿಂದ ಏಕಾಗ್ರತೆಯೊಂದಿಗೆ ಅವರು ಕೆಲಸ ಮಾಡುವ ಚಟುವಟಿಕೆ ಬೆಳೆಸಬಹುದು.
ಗಮನ ಹಂಚಿಕೊಳ್ಳುವ ಆಟ
ಪಜಲ್, ಮೆಮೊರಿ ಗೇಮ್, ಸುಡೊಕು, ಆಧಾರಿತ ಆಟಗಳು ಅಥವಾ ಕಥೆ ಹೇಳುವ ಚಟುವಟಿಕೆಗಳು ಮಕ್ಕಳ ಎಳೆಯ ಬುದ್ಧಿಯನ್ನೇ ಕೇಂದ್ರೀಕರಿಸಲು ಸಹಕಾರಿಯಾಗುತ್ತದೆ.
ಆರೋಗ್ಯಕರ ಆಹಾರ ಮತ್ತು ಒತ್ತಡ ರಹಿತ ವಾತಾವರಣ
ಓಮೆಗಾ-3, ಪ್ರೋಟೀನ್, ಕಬ್ಬಿಣ ಹಾಗೂ ವಿಟಮಿನ್‌ಗಳಿರುವ ಆಹಾರ ಏಕಾಗ್ರತೆಗೆ ಉತ್ತಮ. ಜೊತೆಗೆ ಮಕ್ಕಳ ಮೇಲೆ ಬೆದರಿಕೆ ಅಥವಾ ಒತ್ತಡ ನೀಡದ ಮನಸ್ಥಿತಿ ಸಹ ಅವಶ್ಯಕ.