ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್: ಪ್ರತಿ ಕ್ವಿಂಟಾಲ್ ಗೆ ಅಡಿಕೆ ದರ 2 ಸಾವಿರ ರೂ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಪ್ರತಿ ಕ್ವಿಂಟಾಲ್‌ಗೆ ಅಡಿಕೆ ದರ 2 ಸಾವಿರ ರೂ.ಗಳಿಗೆ ಕುಸಿತ ಕಂಡಿದೆ.

ಭೂತಾನ್​ನಿಂದ 17 ಸಾವಿರ ಟನ್ ಅಡಕೆ ಆಮದು ಹಿನ್ನೆಲೆಯಲ್ಲಿ ಪ್ರತಿ ಕ್ವಿಂಟಾಲ್​ ಅಡಿಕೆ ದರ ಎರಡು ಸಾವಿರ ರೂ.ಗೆ ಕುಸಿತಗೊಂಡಿದೆ. ಇದರಿಂದ ಅಡಕೆ ಬೆಳೆಗಾರರಲ್ಲಿ ಆತಂಕ ಶುರು ಮಾಡಿದೆ.

ಅದರಲ್ಲೂ ಹೆಚ್ಚಾಗಿ ಅಡಕೆ ಬೆಳೆಯುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಡಕೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದ್ದು, ಅಡಿಕೆ ದರ ಮತ್ತಷ್ಟು ಕುಸಿಯುವ ಆತಂಕದ ಹಿನ್ನೆಲೆ ರೈತರು ಅಡಿಕೆ ಕೊಯ್ಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!