ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಶಸ್ತ್ರ ಗುಂಪೊಂದು ಮಂಗಳವಾರ ರಾಜ್ಯ ಭದ್ರತಾ ಸಚಿವಾಲಯದ 14 ಉದ್ಯೋಗಿಗಳನ್ನು ಅಪಹರಿಸಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ದಕ್ಷಿಣ ಮೆಕ್ಸಿಕನ್ ರಾಜ್ಯದ ಚಿಯಾಪಾಸ್‌ನಲ್ಲಿ ಭದ್ರತಾ ಪಡೆಗಳು ಅಪಹರಣಕ್ಕೊಳಗಾದ 14 ಭದ್ರತಾ ಸಚಿವಾಲಯದ ಉದ್ಯೋಗಿಗಳಿಗಾಗಿ ಹುಡುಕುತ್ತಿವೆ.
ಅಪಹರಣಕ್ಕೊಳಗಾದ ಎಲ್ಲಾ ಉದ್ಯೋಗಿಗಳು ಪುರುಷರು ಎಂದು ಅಧಿಕಾರಿಗಳು ಖಚಿತಪಡಿಸಿದ್ದು, ಅಪಹರಣಕ್ಕೊಳಗಾದ ಸಿಬ್ಬಂದಿಯನ್ನು ಸಶಸ್ತ್ರ ಗುಂಪಿನ ಸದಸ್ಯರು ರಾಜ್ಯದ ರಾಜಧಾನಿ ಟಕ್ಸ್ಟ್ಲಾ ಗುಟೈರೆಜ್‌ನ ಪಶ್ಚಿಮಕ್ಕೆ 22 ಮೈಲುಗಳಷ್ಟು (34.4 ಕಿಮೀ) ಹೆದ್ದಾರಿಗೆ ಕರೆದೊಯ್ದಿದ್ದಾರೆ ಎಂದು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಎಲ್ಲಾ 14 ಉದ್ಯೋಗಿಗಳು ಪೊಲೀಸ್ ಅಧಿಕಾರಿಗಳಲ್ಲ ಆದರೆ ಆಡಳಿತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ವಕ್ತಾರರು ಈ ಹಿಂದೆ ಎಂದೂ ಇಂತಹ ಘಟನೆ ಸಂಭವಿಸಿಲ್ಲ ಮತ್ತು ಅಪಹರಣದ ಹಿಂದಿನ ಉದ್ದೇಶವನ್ನು ತನಿಖೆ ಮಾಡಲಾಗುತ್ತಿದೆ ಎಂದರು. ರಾಜ್ಯ ಭದ್ರತಾ ಸಚಿವಾಲಯದ 14 ಉದ್ಯೋಗಿಗಳ ಅಪಹರಣದ ಕುರಿತು ಫೆಡರಲ್, ರಾಜ್ಯ ಏಜೆಂಟರು ತನಿಖೆ ನಡೆಸುತ್ತಿದ್ದಾರೆ. ಸುದ್ದಿ ಸಂಸ್ಥೆಗಳು ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಕಾರು ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ನಿಂತಿದ್ದು, ಎಲ್ಲಾ ಉದ್ಯೋಗಿಗಳನ್ನು ಬಂದೂಕು ತೋರಿಸಿ ಕಾರಿನೊಳಗೆ ಕುಳಿತುಕೊಳ್ಳುವಂತೆ ಹೇಳಲಾಗಿದೆ. ಘಟನೆಯ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.