ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಗಯಾ ಪ್ರಾಂತ್ಯದ ಕಾಂಚನಪುರ ಗ್ರಾಮದಲ್ಲಿ ಇಬ್ಬರು ಪೈಲಟ್‌ಗಳನ್ನು ಹೊತ್ತ ಸೇನಾ ವಿಮಾನ ಪತನಗೊಂಡಿದೆ. ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯ ವಿಮಾನವೊಂದು ತರಬೇತಿ ವೇಳೆ ಕೃಷಿ ಜಮೀನಿನಲ್ಲಿ ಪತನಗೊಂಡಿದೆ.
ಸೇನೆಯ ವಿಮಾನವೊಂದು ಪತನಗೊಂಡಿದ್ದು, ಓರ್ವ ಮಹಿಳೆ ಸೇರಿದಂತೆ ಇಬ್ಬರು ಪೈಲಟ್‌ಗಳು ಸ್ವಲ್ಪಮಟ್ಟಿಗೆ ಗಾಯಗೊಂಡಿದ್ದಾರೆ. ಗ್ರಾಮಸ್ಥರು ಕೂಡಲೇ ಪೈಲಟ್‌ಗಳನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಸ್ವಂತ ಶಕ್ತಿಯಿಂದ ಜಮೀನಿನಿಂದ ಲಘು ವಿಮಾನವನ್ನು ಹೊತ್ತೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.