ನಾನು ಕೊಟ್ಟ ಹೇಳಿಕೆ ಅಪರಾಧ ಅನ್ನೋದಾದ್ರೆ ಅರೆಸ್ಟ್ ಮಾಡಿ, ವಿವಿಐಪಿ ಟ್ರೀಟ್ಮೆಂಟ್ ಬೇಕಾಗಿಲ್ಲ: ಬಿ.ಕೆ ಹರಿಪ್ರಸಾದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋಧ್ರಾ ಮಾದರಿ ಹತ್ಯಾಕಾಂಡ ನಡೆಯಬಾರದು ಎಂಬ ಹೇಳಿಕೆ ಸಂಬಂಧ ಇಂದು ಪೊಲೀಸರು ಹೇಳಿಕೆ ಪಡೆಯಲು ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ (B.K Hariprasad) ಇರುವ ಕುಮಾರಕೃಪಾ ಗೆಸ್ಟ್ ಹೌಸ್‍ಗೆ ತೆರಳಿದ್ದಾರೆ .

ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಬಿ.ಕೆ ಹರಿಪ್ರಸಾದ್, ಪೊಲೀಸರು ನನ್ನ ವಿಚಾರಣೆ ಮಾಡಲು ಬಂದಿದ್ದರು. ನಾನು ಕೊಟ್ಟ ಹೇಳಿಕೆ ಅಪರಾಧ ಅನ್ನೋದಾದ್ರೆ ಪೊಲೀಸ್ ಸ್ಟೇಶನ್‍ಗೆ ಕರೆದು ಅರೆಸ್ಟ್ ಮಾಡಿ ವಿಚಾರಣೆ ಮಾಡಿ ಎಂದಿದ್ದೇನೆ. ವಿವಿಐಪಿ ಟ್ರೀಟ್ಮೆಂಟ್ ನನಗೆ ಬೇಕಾಗಿಲ್ಲ, ರತ್ನಗಂಬಳಿ ಬೇಕಾಗಿಲ್ಲ ಎಂದು ಹೇಳಿದ್ದಾರೆ.

ಈಗ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ನಾನು ಅಪರಾಧಿ ಅಲ್ಲ. ಪೊಲೀಸರು ಟಾರ್ಗೆಟ್ ಮಾಡಿದ್ರೆ ನಾನು ಬಗ್ಗುವವನಲ್ಲ. ನಾನು ದೇಶದಲ್ಲಿ ಓಡಾಡಿದ್ದೇನೆ. ನಾನು ಕಾಂಗ್ರೆಸ್ ನಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದಲ್ಲಿ ನನ್ನ ಪರಿಸ್ಥಿತಿಯೇ ಈ ರೀತಿಯಾದ್ರೆ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

ನಾನು ಮಂಪರು ಪರೀಕ್ಷೆಗೂ ರೆಡಿ. ನಾನು ಅಯೋಧ್ಯೆಗೆ (Ayodhya) ಹೋಗುವವರಿಗೆ ರಕ್ಷಣೆ ವಿಚಾರವಾಗಿ ಮಾತನಾಡಿರೋದು. ಹೀಗಾಗಿ ನಾನು ಅಪರಾಧಿ ಅಲ್ಲ ಎಂದು ಹರಿಪ್ರಸಾದ್ ಅವರು ಪುನರುಚ್ಛರಿಸಿದರು.

ಕಲ್ಲಡ್ಕ ಪ್ರಭಾಕರ್ (Kalladaka Prabhakar) ಮೇಲೆ ಯಾವುದೇ ಕೇಸ್ ಹಾಕಿಲ್ಲ, ಅನಂತ್ ಕುಮಾರ್ ಹೆಗಡೆ (Anant Kumar Hegde) ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನನ್ನ ಹೇಳಿಕೆ ಪ್ರಚೋದನೆ ಆದ್ರೆ ಕ್ರಮ ತೆಗೆದುಕೊಳ್ಳಲಿ. ನನಗೆ ರತ್ನಗಂಬಳಿ ಬೇಡ, ಯಾವುದೇ ಸಂದರ್ಭದಲ್ಲಿ ವಿಚಾರಣೆಗೆ ರೆಡಿ. ಪೊಲೀಸರ ಮೂಲಕ ಹೆದರಿಸೋದು ಭ್ರಮೆ. ನಾನು ಕಾಂಗ್ರೆಸ್ ಸರ್ಕಾರ ಅಂದ್ಕೊಡಿದ್ದೆ. ನನ್ನ ಪರಿಸ್ಥಿತಿ ಈ ರೀತಿ ಆದ್ರೆ, ಕಾರ್ಯಕರ್ತರ ಪರಿಸ್ಥಿತಿ ಏನು ಎಂಬ ಬಗ್ಗೆ ಯೋಚನೆ ಮಾಡ್ತಿದ್ದೇನೆ ಎಂದರು.

ಸರ್ಕಾರದ ಜವಾಬ್ದಾರಿ ಬಗ್ಗೆ ಮಾತನಾಡಿದ್ದೆ ನಾನು, ನನ್ನ ತಿಳುವಳಿಕೆ, ಸಲಹೆಯನ್ನ ಬೇರೆ ರೀತಿಯಲ್ಲಿ ತೆಗೆದುಕೊಂಡ್ರೆ ನಾನು ಜವಾಬ್ದಾರನಲ್ಲ. ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಸ್ಚೇಷನ್ ಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿ ಎಂದಿದ್ದೇನೆ. ನಮ್ಮದು ಅದ್ಭುತವಾದ ಸರ್ಕಾರ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here