ಸಚಿವ ಸೆಂಥಿಲ್ ಬಾಲಾಜಿ ಬಂಧನ: ಬಿಜೆಪಿ ವಿರುದ್ಧ ಸಿಎಂ ಎಂಕೆ ಸ್ಟಾಲಿನ್ ವಾಗ್ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ (Senthil Balaji) ಅವರನ್ನು ಜಾರಿ ನಿರ್ದೇಶನಾಲಯದ ಬಂಧಿಸಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಾರಿ ನಿರ್ದೇಶನಾಲಯದ ವಿಚಾರಣೆ ವೇಳೆ ಅಸ್ವಸ್ಥಗೊಂಡಿರುವ ಸೆಂಥಿಲ್ ಬಾಲಾಜಿ (Senthil Balaji) ಅವರನ್ನು ಚೆನ್ನೈನ ಓಮಂಡೂರರ್ ಸರ್ಕಾರಿ ಆಸ್ಪತ್ರೆಯಲ್ಲಿ ಭೇಟಿಯಾದ ಸ್ಟಾಲಿನ್ 2024ರ ಚುನಾವಣೆಯಲ್ಲಿ ಜನರು ಬಿಜೆಪಿಗೆ(BJP) ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಸಚಿವರು ಅಧಿಕಾರಿಗಳಿಗೆ ಸಹಕರಿಸುತ್ತಿರುವಾಗ ಇಷ್ಟು ಸುದೀರ್ಘ ವಿಚಾರಣೆಯ ಅಗತ್ಯ ಏನಿತ್ತು , ಇಡಿ ಅಧಿಕಾರಿಗಳ ಇಂತಹ ಅಮಾನವೀಯ ಕ್ರಮದ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಪ್ರಕರಣವಿದ್ದರೂ ಸೆಂಥಿಲ್ ಬಾಲಾಜಿ ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತಾರೆ. ನಾವು ನಮ್ಮ ರಾಜಕೀಯ ನಿಲುವನ್ನು ದೃಢವಾಗಿ ಮುಂದುವರಿಸುತ್ತೇವೆ. ಡಿಎಂಕೆ ಈ ಪ್ರಕರಣವನ್ನು ಸಂಕಲ್ಪದಿಂದ ಕಾನೂನಾತ್ಮಕವಾಗಿ ಎದುರಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿಯ ಬೆದರಿಕೆಗೆ ಡಿಎಂಕೆ ಹೆದರುವುದಿಲ್ಲ, ಜನರು ಇಂತಹ ದಬ್ಬಾಳಿಕೆಯನ್ನು ನೋಡುತ್ತಿದ್ದಾರೆ.2024 ರ ಲೋಕಸಭೆ ಚುನಾವಣೆಯಲ್ಲಿ ಜನರು ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸೆಂಥಿಲ್ ಬಾಲಾಜಿ ಅವರನ್ನು ಗಂಟೆಗಳ ವಿಚಾರಣೆಯ ನಂತರ ಇಡಿ ಬುಧವಾರ ಬೆಳಗ್ಗೆ ಬಂಧಿಸಿದೆ. ಬಂಧನದ ನಂತರ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದ ಆಸ್ಪತ್ರೆಯಲ್ಲಿ ಸಚಿವರು ಬಿಕ್ಕಿ ಬಿತ್ತಿ ಅತ್ತಿದ್ದಾರೆ. ಸೆಂಥಿಲ್ ಬಾಲಾಜಿ ಮೇಲೆದು ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿದರೆ, ಬಿಜೆಪಿ ನಾಯಕರು ಅವರು ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!