ಎನ್‌ಟಿಎಂಎಸ್ ಶಾಲಾ ಸ್ಥಳಾಂತರಕ್ಕೆ ವಿರೋಧಿಸಿ ಪ್ರತಿಭಟಿಸಿದವರ ಬಂಧನ

ದಿಗಂತ ವರದಿ ಮೈಸೂರು:

ನಗರದ ನಾರಾಯಣ ಶಾಸ್ತಿç ರಸ್ತೆಯಲ್ಲಿರುವ ಎನ್ ಟಿಎಂ ಎಸ್ ಶಾಲೆ ಸ್ಥಳಾಂತರ ಮಾಡಿದ್ದನ್ನು ವಿರೋಧಿಸಿ ಎನ್ ಟಿಎಂಎಸ್ ಶಾಲೆ ಉಳಿಸಿ ಹೋರಾಟ ಸಮಿತಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಶಾಲೆ ಮುಂಭಾಗದ ರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪ್ರಥಮ ಕನ್ನಡ ಶಾಲೆ ಉಳಿಯಲಿ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಶಾಸಕ ಎಂ. ಕೆ ಸೋಮಶೇಖರ್ ಸೇರಿದಂತೆ ಜತೆ ಕೆಲ ಹೋರಾಟಗಾರರನ್ನ ಪೊಲೀಸರು ಬಂಧಿಸಿದರು . ನಂತರ ಶಾಂತಿಯುತ ಪ್ರತಿಭಟನೆಗೆ ಅನುವು ಮಾಡಿಕೊಟ್ಟರು.
ಪೋಲಿಸ್ ಬಂದೋಬಸ್ತ್ ನಲ್ಲಿ ಎನ್ ಟಿ ಎಂ ಎಸ್ ಶಾಲಾ ಮಕ್ಕಳಿಗೆ ತರಗತಿ ಆರಂಭ.
ಮಹಾರಾಣಿ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಕಟ್ಟಡದಲ್ಲಿ ಪೋಲಿಸ್ ಬಂದೂಬಸ್ತ್ ನಲ್ಲಿ ಎನ್ ಟಿ ಎಂ ಎಸ್ ಶಾಲಾ ಮಕ್ಕಳಿಗೆ ತರಗತಿ ಆರಂಭವಾಗಿದ್ದು, ಮಕ್ಕಳಿಗೆ ಡಿಡಿಪಿಐ ರಾಮಚಂದ್ರರಾಜೆ ಅರಸ್ ಸಿಹಿ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಸರ್ಕಾರ ಆದೇಶದಂತೆ ಶಾಲೆ ಸ್ಥಳಾಂತರ ಮಾಡಿದ್ದೇವೆ. ಇದು ಎನ್ ಟಿಎಂ ಎಸ್ ಶಾಲೆಯ ಮೂಲ ಕಟ್ಟಡ. ಮೊದಲು ಶಾಲೆ ಆರಂಭವಾಗಿದ್ದೆ ಹಾಗಾಗಿಯೇ ಮತ್ತೆ ಇಲ್ಲಿಯೇ ಈಗ ಮತ್ತೆ ಮೂಲ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದೇವೆ. ಸರ್ಕಾರಿ ಮಹಾರಾಣಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ನಡೆಯುತ್ತಿದೆ. ಎಲ್ಲಾ ಸುಸಜ್ಜಿತ ವ್ಯವಸ್ಥೆ ಮಾಡಿಕೊಡಲಾಗುವುದು. ಶಿಕ್ಷಣ ಸಚಿವರು ಕೂಡ ಶಾಲೆ ಅಭಿವೃದ್ಧಿ ಕುರಿತು ಯೋಜನೆ ರೂಪಿಸಿ ಸರ್ಕಾರಕ್ಕೆ ಕಳಹಿಸಿಕೊಡುವಂತೆ ಸೂಚಿಸಿದ್ದಾರೆ. ಎನ್ ಟಿ ಎಂ ಶಾಲೆ ಮುಚ್ಚಿಲ್ಲ. ಮುಂದುವರೆದಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!