ಹೊಸದಿಗಂತ ವರದಿ ಹುಬ್ಬಳ್ಳಿ:
ಬಿಜೆಪಿ ಶ್ರೀಕಾಂತ ಪೂಜಾರಿ ಬಂಧನ ವಿಚಾರವನ್ನು ಲೋಕಸಭಾ ಚುನಾವಣೆ ಅಜೆಂಡಾವಾಗಿ ಬಳಿಸಿಕೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬಿಜೆಪಿ ವಿರುದ್ಧ ಹರಿಹಾಯ್ದರು.
ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಇಂತಹ ವಿಚಾರ ಬಿಟ್ಟರೇ ಬೇರೆ ಯಾವುದೇ ಅಂಜೆಡಾ ಇಲ್ಲ. ಇನ್ನೂ ಪ್ರಕರಣದಲ್ಲಿ 36 ಜನರಿದ್ದಾರೆ. ಶ್ರೀಕಾಂತ ಪೂಜಾರಿ ಒಬ್ಬರೆನಾ ಹಿಂದೂ? ಇನ್ನೂ 20 ಕೇಸ್ ಗಳಿದ್ದು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದರು.
ರಾಮಮಂದಿರ ಪ್ರಾರಂಭ ಮಾಡಿದ್ದೆ ಕಾಂಗ್ರೆಸ್. ಕಾಂಗ್ರೆಸ್ ನಾಯಕ ರಾಜೀವ ಗಾಂಧಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಕಳೆದ 40 ವರ್ಷ ದಿಂದ ರಾಮಮಂದಿರಕ್ಕೆ ನೀಡಿದ ಇಟ್ಟಿಗೆ ಎಲ್ಲಿವೆ ಎಂದು ಪ್ರಶ್ನಿಸಿದರು.
ನಾವು ಸಹ ರಾಮನ ಭಕ್ತರು. ಎಲ್ಲರಿಗೂ ಸಮ ಬಾಳು, ಸಮಪಾಲು ಎಂದು ಬದುಕುತ್ತಿದ್ದೇವೆ. ಬಿಜೆಪಿ ಹಿಂದೂಗಳ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಕಳೆದ 10 ವರ್ಷದಲ್ಲಿ ಹಿಂದೂಳಿಗೆ ಏನು ಮಾಡಿದ್ದಾರೆ. ನಾನು ಹಿಂದೂ, ನೀವೂ ಕೂಡ ಹಿಂದು ತಾನೇ ನಿಮಗೆ ಏನು ಮಾಡಿದ್ದಾರೆ. ಬಿಜೆಪಿಯಿಂದ ಕೆಲವು ಉದ್ಯಮಿದಾರರಿಗೆ ಅನುಕೂಲ ಆಗಿದೆ ಎಂದು ಹೇಳಿದರು.