ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಮಾಜಿ ಪ್ರಧಾನಿ ಶೇಖ್ ಹಸೀನಾ, ಅವರ ಮಗಳು, ಅವರ ಸರಕಾರದಲ್ಲಿದ್ದ ರಾಜಕೀಯ ಸಹೋದ್ಯೋಗಿಗಳು ಮತ್ತು ಮಿಲಿಟರಿ ಅಧಿಕಾರಿಗಳ ವಿರುದ್ಧ ಬಂಧನ ವಾರಂಟ್‌ಗಳನ್ನು ಹೊರಡಿಸಿದೆ.
ವಸತಿ ನಿವೇಶನವನ್ನು ಅಕ್ರಮವಾಗಿ ಖರೀದಿಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ನ್ಯಾಯಾಲಯವು ಇಂದು ಮಾಜಿ ಪ್ರಧಾನಿ ಶೇಖ್ ಹಸೀನಾ , ಅವರ ಪುತ್ರಿ ಸೈಮಾ ವಾಜೆದ್ ಪುಟುಲ್ ಮತ್ತು ಇತರ 17 ಜನರ ವಿರುದ್ಧ ಹೊಸ ಬಂಧನ ವಾರಂಟ್ ಹೊರಡಿಸಿದೆ.
ಢಾಕಾ ಮೆಟ್ರೋಪಾಲಿಟನ್ ಹಿರಿಯ ವಿಶೇಷ ನ್ಯಾಯಾಧೀಶ ಜಾಕಿರ್ ಹುಸೇನ್ ಗಾಲಿಬ್ ಅವರು ACCಯ ಆರೋಪ ಪಟ್ಟಿಯನ್ನು ಸ್ವೀಕರಿಸಿ, ತಲೆಮರೆಸಿಕೊಂಡಿರುವ ವ್ಯಕ್ತಿಗಳನ್ನು ಬಂಧಿಸಲು ಆದೇಶಿಸಿದರು.
ಚಾರ್ಜ್‌ಶೀಟ್‌ನ ಪ್ರಕಾರ, ಪುಟುಲ್ ತನ್ನ ತಾಯಿ, ಆಗಿನ ಪ್ರಧಾನಿ ಹಸೀನಾ ಅವರ ಮೇಲೆ ಅನಗತ್ಯ ಪ್ರಭಾವ ಬೀರಿ ಸರ್ಕಾರಿ ಸ್ವಾಮ್ಯದ ರಾಜಧಾನಿ ಉನ್ಯಾನ್ ಕಾರ್ತ್ರಿಪಕ್ಖಾ (ರಾಜೂಕ್) ಅನ್ನು ಬೈಪಾಸ್ ಮಾಡಿ, ಭೂ ಹಂಚಿಕೆಯನ್ನು ನಿಯಂತ್ರಿಸುವ ಕಾನೂನು ಕಾರ್ಯವಿಧಾನಗಳನ್ನು ಉಲ್ಲಂಘಿಸಿ, ಜಮೀನನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆ. ಪುಟುಲ್ ಮತ್ತು ಅವರ ಕುಟುಂಬವು ಈಗಾಗಲೇ ಢಾಕಾದಲ್ಲಿ ಆಸ್ತಿಗಳನ್ನು ಹೊಂದಿದೆ ಎಂದು ACC ಹೇಳಿಕೊಂಡಿದೆ.