# Arrestkohli ಟ್ರೆಂಡಿಂಗ್! ಎಲ್ಲಾ ಬಿಟ್ಟು ಅವರ ಸುದ್ದಿಗ್ಯಾಕೆ ಬರ್ತೀರ ಎಂದ ಫ್ಯಾನ್ಸ್‌!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟರ್‌ ವಿರಾಟ್‌ ಕೊಹ್ಲಿಯನ್ನು ಅರೆಸ್ಟ್‌ ಮಾಡಿ ಎನ್ನುವ ಕೂಗು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸದ್ಯ #Arrestkohli ಕೂಡ ಟ್ರೆಂಡಿಂಗ್‌ ಆಗಿದೆ. ಇದಕ್ಕೆ ಆರ್‌ಸಿಬಿ ಹಾಗೂ ವಿರಾಟ್‌ ಫ್ಯಾನ್ಸ್‌ ಗರಂ ಆಗಿದ್ದಾರೆ. ಎಲ್ಲಾ ಬಿಟ್ಟು ಕೊಹ್ಲಿ ಅರೆಸ್ಟ್‌ ಮಾಡಿ ಅಂತಿದ್ದೀರಿ ಇದಕ್ಕೆ ಅರ್ಥವೇ ಇಲ್ಲ ಎಂದು ಮಾತನಾಡಿದ್ದಾರೆ.

ಕಾರ್ಯಕ್ರಮ ಆಯೋಜನೆ ಮಾಡಿದವರು, ಅಂದಾಜು ಲೆಕ್ಕಿಸದವರು, ಈ ಅವಘಡಕ್ಕೆ ಕಾರಣರಾದವರನ್ನು ಸರ್ಕಾರ ಗುರುತಿಸಿ ಶಿಕ್ಷೆ ನೀಡುತ್ತಿದೆ. ಕೊಹ್ಲಿ ಹಾಗೂ ಟೀಂ ಆಹ್ವಾನ ಒಪ್ಪಿ ಬಂದವರಷ್ಟೆ ಅವರನ್ಯಾಕೆ ಮಧ್ಯಕ್ಕೆ ತರ್ತೀರಿ ಎಂದು ಗರಂ ಆಗಿದ್ದಾರೆ.

ಈಗಾಗಲೇ ಬೆಂಗಳೂರಿನ ಫ್ಯಾನ್ಸ್‌ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಕೊಹ್ಲಿ ಕಾಲ್ತುಳಿತ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!